ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚಂಬಲ್ ಕಣಿವೆಯ ಡಕಾಯಿತರಿಗಿಂತ ದೊಡ್ಡ ಡಕಾಯಿತವಾಗಿದೆ. ಜಿಎಸ್‍ಟಿ ಹೆಸರಲ್ಲಿ ಜನಸಾಮಾನ್ಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ ಕುಡಚಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಶಾಸಕ ರಮೇಶ ಕುಡಚಿ ಈಗಾಗಲೇ ಜಿಎಸ್‍ಟಿ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿಯೂ ಜಿಎಸ್‍ಟಿ ಇತ್ತು. ಇವತ್ತು ಇದೆ. ಆದರೆ ಕಾಂಗ್ರೆಸ್ ಎಷ್ಟು ಜಿಎಸ್‍ಟಿ ಹಾಕಬೇಕು ಎಂದು ಹೇಳಿತ್ತು.
ಇದೇ ಜಿಎಸ್‍ಟಿಗೆ ಬಿಜೆಪಿ ವಿರೋಧ ಮಾಡುತ್ತಿತ್ತು. ಇವರು ಅಧಿಕಾರಕ್ಕೆ ಬಂದ ನಂತರ ಓರ್ವ ಸಾಮಾನ್ಯ ನಾಗರಿಕನಿಗೆ ಯಾವ ದೆಸೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕೆಳಗಿನಿಂದ ಮೇಲಿನಿಂದ ಅಥವಾ ಮೇಲಿನಿಂದ ಕೆಳಗೆ ನೋಡಿದಾಗ ಒಬ್ಬ ಮನುಷ್ಯನಿಗೆ ಸಿಗಬೇಕಾದ ಊಟ, ತಿಂಡಿ, ದವಸ ಧಾನ್ಯಗಳು, ಔಷಧಿಗಳು ಸೇರಿ ಎಲ್ಲದಕ್ಕೂ ಟ್ಯಾಕ್ಸ ಕೊಡಬೇಕಾಗಿದೆ. ಆಸ್ಪತ್ರೆಗಳಲ್ಲಿ ಶೇ.18ರಷ್ಟು ಟ್ಯಾಕ್ಸ ಕೊಡಬೇಕಾಗಿದೆ ಎಂದು ಕಿಡಿಕಾರಿದರು.