Breaking News

ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರ ಬಂಧನ

Spread the love

ಅಂಕೋಲಾ : ತಾಲೂಕಿನ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ ರಾಜ್ಯ ವ್ಯಕ್ತಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಕಳ್ಳತನ ಮಾಡಿದ 7 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ

ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಕೇರಳ ಕಾಸರಗೋಡು ನಿವಾಸಿ ಟೋನಿ ಜಾನ್ ಜೇಮ್ಸ್ (34) ಮತ್ತು ಹುಬ್ಬಳ್ಳಿಯ ಗದಗ ರಸ್ತೆ ನಿವಾಸಿ ಮಹಮ್ಮದ್ ಅಲಿ ಮೆಹಬೂಬ್ ಸಾಬ ಕುಂದಗೋಳ(38) ಬಂಧಿತ ಆರೋಪಿಗಳು.

 

ಅಂಕೋಲಾ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಗಸ್ತು ಕರ್ತವ್ಯದ ನಿಮಿತ್ತ ಅಂಕೋಲಾ ಬಸ್ ನಿಲ್ದಾಣದ ಒಳಗೆ ಹೋಗಿದ್ದ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳು ಪೊಲೀಸ್ ಜೀಪ್ ಕಂಡೊಡನೆ ಬಸ್ ನಿಲ್ದಾಣದದಿಂದ ಓಡಿ ಹೋಗಲು ಯತ್ನಿಸಿದಾಗ, ಬೆಂಬತ್ತಿದ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ, ಇವರು ಮೊಬೈಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ