ಚಿರತೆ ಸಿಗದ ಕಾರಣ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆ ವಿಜಯಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಉಮೇಶ ಕತ್ತಿ ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ.ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲಾ .ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು ತಂದಿದ್ದೇವೆ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲಾ, ಚಿರತೆ ಇನ್ನೂ ಸಿಕ್ಕಿಲ್ಲಾ ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲಾ .