ಗೋಕಾಕ: ಶ್ರಾವಣದ ಮಾಸ ಸದಾ ಹಬ್ಬ ಹರಿದಿನಿ ಭಕ್ತಿ ಗಳಿಂದ ಕೂಡಿದ ಮಾಸ ಇದರ ಪ್ರಯುಕ್ತ ನಾಡಿ ನಾದ್ಯಂತ ಸಡಗರ ಸಂಭ್ರಮ ಗಳು ಜರಗುತ್ತವೆ.
ಇದರ ಪ್ರಯುಕ್ತವಾಗಿಶ್ರಾವಣ ಮಾಸ ಸಪ್ತಾಹದ ಮಂಗಳ ಮಹೋತ್ಸವದ ಅಂಗವಾಗಿ ಗೋಕಾಕ ನಗರದ ಕಿಲ್ಲಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಪಲ್ಲಕ್ಕಿಯೊಂದಿಗೆ ನಗರ ಪ್ರದಕ್ಷಿಣೆ ಜರುಗಿತು.
ಈ ಕಾರ್ಯಕ್ರಮದಲ್ಲಿ ಕಿಲ್ಲಾದ ಅನೇಕ ಹಿರಿಯರು ಯುವಕರು ಪಾಲ್ಗೊಂಡಿದ್ದರು ಅನೇಕ ಸುಮಂಗಲಿಯರು ಕಳಶದೊಂದಿಗೆ ಭಾಗವಹಿಸಿದ್ದರು. ಹಾಗೂ ವಿಶಿಷ್ಠವಾದ ಕರಡಿ ಮಜಲು ವಾದ್ಯದವರು ಪಾಲ್ಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.