ಒಂದು ವಾರದಿಂದ ಶಾಂತವಾಗಿದ್ದ ಮಳೆರಾಯ ಬೆಳಗಾವಿಯಲ್ಲಿ ಮತ್ತೆ ತನ್ನ ಆರ್ಭಟ ಆರಂಭಿಸಿದ್ದು. ಮಧ್ಯಾಹ್ನ ಸತತವಾಗಿ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು.
ಹೌದು ಬೆಳಗ್ಗೆಯಿಂದ ಸ್ವಲ್ಪ ಪ್ರಮಾಣದ ಬಿಸಿಲಿತ್ತು. ಆದರೆ ಮಧ್ಯಾಹ್ನದ ನಂತರ ಏಕಾಏಕಿ ಜೋರಾಗಿ ಮಳೆ ಆರಂಭವಾಯಿತು. ಇದರಿಂದ ಜನ ಹೊರಗಡೆ ಓಡಾಡಲು ತೀವ್ರ ಪರದಾಡುವಂತಾಯಿತು.ನಗರದ ಚನ್ನಮ್ಮ ಸರ್ಕಲ್, ಖಡೇಬಜಾರ್, ಕಾಲೇಜು ರಸ್ತೆ, ಶನಿವಾರ್ ಕೂಟ ಸೇರಿದಂತೆ ಮುಂತಾದ ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು.
ಇನ್ನು ಗಣೇಶೋತ್ಸವ ಹಬ್ಬ ಬರುತ್ತಿರುವ ಹಿನ್ನೆಲೆ ಮಾರ್ಕೆಟ್‌ಗೆ ಬಂದಿದ್ದ ಸಾರ್ವಜನಿಕರು ಹಾಗೂ ಕೆಲಸದ ನಿಮಿತ್ಯ ಮಕ್ಕಳನ್ನು ಕರೆದುಕೊಂಡು ಪಕ್ಕದ ಊರುಗಳಿಂದ ಬೆಳಗಾವಿಗೆ ಬಂದಿದ್ದವರು ಕೂಡ ಮಳೆಗೆ ಸಿಲುಕಿ ಹೈರಾಣದರು. ಇನ್ನು ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಅನಿರೀಕ್ಷಿತ ಮಳೆಯಿಂದಾಗಿ ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ಈ ವೇಳೆ ಕಂಡು ಬಂತು.