ಗುರೂಜಿ ಭೇಟಿಯಾಗಲು ಚೆನ್ನೈಗೆ ಹೊರಟಿದ್ದ ಜ್ಯೋತಿಷಿಯನ್ನು ಬೆಳಗಾವಿ ತಾಲೂಕಿನ ಹಲಗಾದಲ್ಲಿ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಹಿರೇಬಾಗೇವಾಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಬೆಳಗಾವಿ ತಾಲೂಕಿನ ಶಿಂಧೋಳ್ಳಿ ಗ್ರಾಮದ ಗದಗಯ್ಯ ಹಿರೇಮಠನ ರುಂಡವನ್ನೇ ಕತ್ತರಿಸಿ ಕೊಲೆ ಮಾಡಲಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರೇಬಾಗೇವಾಡಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸಿದ್ದು.
ಕೊಲೆ ಮಾಡಿದವನು ಬೇರೆ ಯಾರೂ ಅಲ್ಲ, ಕೊಲೆಯಾದ ಗದಗಯ್ಯನ ಆಪ್ತಮಿತ್ರ ವಿಠಲ್ ಸಾಂಬ್ರೇಕರ್ ಅಂತಾ. ಈತನನ್ನು ಬಂಧಿಸುವಲ್ಲಿ ಹಿರೇಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಪ್ತಮಿತ್ರರ ನಡುವಿನ ಎರಡು ಲಕ್ಷ ರೂ ಸಾಲದ ವ್ಯವಹಾರ ಕೊಲೆಯಲ್ಲಿ ಅಂತ್ಯವಾಗಿದೆ.