ಬೆಳಗಾವಿಯ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಹಬ್ಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಧ್ಯಾರ್ಥಿಗಳು ಸಾಂಪ್ರದಾಯಿಕ ಉಡುಪನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡ ಹಬ್ಬಕ್ಕೆ ವಿಶೇಷ ಮೆರಗನ್ನು ತಂದರು.
ಹೌದು ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯುಎಸಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಇಂದು ಶನಿವಾರ ಆಗಸ್ಟ್ ೨೭ ರಂದು ಕಾಲೇಜಿನ ಆವರಣದಲ್ಲಿ ಕನ್ನಡ ಹಬ್ಬ ವಿಶೇಷ ಕಾರ್ಯಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕೆಎಲ್‌ಇಯ ಯುಎಸ್‌ಎಂ ಮೆಡಿಕಲ್ ಪ್ರೊಗ್ರಾಮ್ ನಿರ್ದೇಶಕರಾದ ಡಾ. ಎಚ್.ಬಿ ರಾಜಶೇಖರ್, ಮುಖ್ಯ ಅತಿತಿಗಳಾಗಿ ಲಿಂಗರಾಜ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಬಸವರಾಜ್ ಜಗಜಂಪಿ ಮೊದಲಾಗ ಗಣ್ಯರು ಹಾಜರಿದ್ದರು.
ಈ ವೇಳೆ ಕಾಲೇಜಿನ ಆವರಣದಲ್ಲಿ ಡೊಳ್ಳು ಮೊದಲಾದ ವಾದ್ಯಗಳು ಮೊಳಗಿದವು. ಈ ವೇಳೆ ಕನ್ನಡ ಬಾವುಟ ಆಗಸದೆತ್ತರಕ್ಕೆ ರಾರಾಜಿಸುತ್ತಿತ್ತು. ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ವೇಶಭೂಷಣಗಳನ್ನು ತೊಟ್ಟು ಕೈಯ್ಯಲ್ಲಿ ಆರತಿಯನ್ನು ಹಿಡಿದು, ತಲೆಯ ಮೇಲೆ ಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.