ಮುಂಬೈ: ಮಹಾರಾಷ್ಟ್ರದಾದ್ಯಂತ ಗಣಪನ ಹಬ್ಬವೆಂದರೆ ಅತ್ಯಂತ ವಿಶೇಷವಾಗಿಯೇ ಆಚರಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಸಂಘ-ಸಂಸೆœಗಳು ವಿವಿಧ ಶೈಲಿಯ ಗಣೇಶನ ವಿಗ್ರಹಗಳನ್ನು ಕೂರಿಸಲಿವೆ.
ಮಹಾರಾಷ್ಟ್ರದ ಪ್ರಮುಖ ನಗರ ಪುಣೆಯ ಸ್ಥಳೀಯ ಸಮಿತಿಯೊಂದು ಕೂರಿಸಲಿರುವ ಗಣೇಶನ ವಿಗ್ರಹಕ್ಕೆ ರಾಜಕೀಯ ಟಚ್ ಸಿಗಲಿದೆ.
ಈ ಬಾರಿ ಶಿವಸೇನೆಯ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಅವರ ಬಣಗಳಿರಲಿವೆ!
ಗಣೇಶ ಮಂಡಲದ ಅಲಂಕಾರಕ್ಕಾಗಿ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಅವರ ಪ್ರತಿಮೆ ಸಿದ್ಧಮಾಡಿಕೊಡಲು ಪ್ರಸಿದ್ಧ ಕಲಾಕಾರ ಸತೀಶ್ ತರು ಅವರಿಗೆ ಆರ್ಡರ್ ಕೊಟ್ಟಿವೆ. ಈ ಪ್ರತಿಮೆಗಳ ಮೂಲಕ ರಾಜ್ಯದ ರಾಜಕೀಯ ಹೊಯ್ದಾಟವನ್ನು ಪ್ರತಿಬಿಂಬಿಸುವ ಪ್ರಯತ್ನವನ್ನು ಯುವಕರ ತಂಡ ಮಾಡಲಿದೆಯಂತೆ.
ಇತ್ತೀಚೆಗಷ್ಟೇ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡು ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ.