Breaking News

ರಾಜೀನಾಮೆ ಸ್ವೀಕಾರ ಮಾಡಿಲ್ಲ, ನನ್ನನ್ನು ಸಿಲುಕಿಸುವ ಸಂಚು ಇರಬಹುದು: ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

Spread the love

ಬಾಗಲಕೋಟೆ, ಆ. 23: ‘ಒಂದು ವರ್ಷವಾದರೂ ನನ್ನ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಹೀಗಾಗಿ, ನನ್ನನ್ನು ಸಿಲುಕಿಸುವ ಸಂಚು ಇರಬಹುದು’ ಎಂದು ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸೇರಿದರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

ಹೀಗಾಗಿ, ಇನ್ನೂ ರಾಜೀನಾಮೆ ಸ್ವೀಕಾರ ಮಾಡಿಲ್ಲ. ಅಲ್ಲದೆ, ನನ್ನನ್ನು ಯಾವುದರಲ್ಲಾದರೂ ಸಿಕ್ಕಿಸಬಹುದು’ ಎಂದು ಅವರು ತಿಳಿಸಿದರು.

ನಾನು ಪೊಲೀಸ್ ಅಧಿಕಾರಿ ಸ್ಥಾನಕ್ಕೆ ಕಳೆದ ವರ್ಷ ಸೆಪ್ಟಂಬರ್ 16ರಂದು ರಾಜೀನಾಮೆ ಕೊಟ್ಟಿದ್ದೇನೆ. ಆಲ್ ಇಂಡಿಯಾ ಸರ್ವಿಸಸ್ ಪ್ರಕಾರ ನನ್ನ ಪಿಂಚಣಿ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮೌಖಿಕವಾಗಿ 15 ಬಾರಿ ಹಾಗೂ ನಾಲ್ಕು ಬಾರಿ ಪತ್ರ ಬರೆದುಕೊಟ್ಟಿದ್ದೇನೆ. ಆದರೂ ಈವರೆಗೂ ನನ್ನ ರಾಜೀನಾಮೆ ಅಂಗೀಕರಿಸಿಲ್ಲ ಎಂದರು.

 


Spread the love

About Laxminews 24x7

Check Also

ಬಾಗಲಕೋಟೆ: ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

Spread the loveಬಾಗಲಕೋಟೆ: ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಮಹಿಳೆಯರಿಗಾಗಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ