ಹಾವೇರಿ : ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿ ಆಧಾರದ ಮೇಲೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸ್ವಾಮೀಜಿಯವರು ಈಗಾಗಲೇ ಗಡುಉವ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ವರದಿ ಪ್ರಗತಿಯಲ್ಲಿದೆ. ಸಂಪೂರ್ಣ ವರದಿ ಬಂದ ಮೇಲೆ ಅದರ ಶಿಫಾರಸುಗಳು ಏನು ಎಂಬುದನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಮೀಸಲಾತಿಗೆ ತನ್ನದೇಯಾದ ಕಾನೂನು, ಸುಪ್ರೀಂಕೋರ್ಟ್ ಆದೇಶ ಕೂಡ ಇದೆ. ಅದನ್ನು ಪರಿಶೀಲಿಸಲಾಗುವುದು ಎಂದರು.
Laxmi News 24×7