ಬಾಕಿ ಪಾವತಿ ಮಾಡುವವರೆಗೆ ವಿದ್ಯುತ್ ಖರೀದಿ ಮತ್ತು ವಿತರಣೆ ಮಾಡಬೇಡಿ’ ಎಂದು ಕರ್ನಾಟಕ ಸೇರಿದಂತೆ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ ಫರ್ಮಾನು ಹೊರಡಿಸಿದೆ. ಖಾಸಗಿ ವಿದ್ಯುತ್ ಉತ್ಪಾದಕರಿಗೆ ಒಟ್ಟು 5,085 ಕೋಟಿ ರೂ. ಮೊತ್ತವನ್ನು ಈ ರಾಜ್ಯಗಳು ನೀಡಲು ಬಾಕಿ ಇವೆ.
ದಕ್ಷಿಣ ಭಾರತದಿಂದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿಕೊಂಡಿವೆ. ಇದರಿಂದ ವಿದ್ಯುತ್ ಪೂರೈಕೆ ಮತ್ತು ಸರಬರಾಜಿನ ಮೇಲೆ, ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳೇನು ನೋಡೋಣ.
ಏನಿದು ಬೆಳವಣಿಗೆ?
ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಎಸ್ಕಾಂಗಳು ಮತ್ತು ವಿತರಣಾ ಸಂಸ್ಥೆಗಳು ಖಾಸಗಿ ವಿದ್ಯುತ್ ಉತ್ಪಾದಕರಿಂದ ತುರ್ತು ಸಂದರ್ಭದಲ್ಲಿ ವಿದ್ಯುತ್ ಖರೀದಿ ಮಾಡುತ್ತವೆ. ಸದರಿ ಪ್ರಕರಣದಲ್ಲಿ ಕರ್ನಾಟಕ ಸೇರಿ 13 ರಾಜ್ಯಗಳು ಖಾಸಗಿ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಬಾಕಿ ಉಳಿಸಿಕೊಂಡಿವೆ. ಗುರುವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ 13 ರಾಜ್ಯಗಳು ವಿದ್ಯುತ್ ಖರೀದಿ ಮತ್ತು ವಿತರಣೆ ಮಾಡದಂತೆ ತಾಕೀತು ಮಾಡಲಾಗಿದೆ.