ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆದಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು ಕೂಡಲೇ ಎಲ್ಲಾ ಮತದಾರರು ಮತದಾರರ ಗುರುತಿನ ಚೀಟಿಗೆ ಆಧಾರ್‌ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆದಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು ಎಲ್ಲಾ ಮತದಾರರು ತಮ್ಮ ಹಾಗೂ ತಮ್ಮ ಕುಟುಂಬಸ್ಥರು ವೋಟರ್ ಐಡಿಗೆ ಆಧಾರ್ ಕಾರ್ಡ್ನ್ನು ಲಿಂಕ್ ಮಾಡಿಕೊಳ್ಳುವಂತೆ ಕೋರಿದೆ. ಈ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಆದೇಶವನ್ನು ಹೊರಡಿಸಿದ್ದು, ಎಲ್ಲಾ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್‌ನ್ನು ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಇನ್ನು ಮತದಾರರಿಗೇ ಸುಲಭವಾಗಿ ಈ ಕಾರ್ಯಕ್ಕೆ ಸೂಚನೆಯನ್ನು ನೀಡಲಾಗಿದ್ದು ಅತ್ಯಂತ ತ್ವರಿತವಾಗಿ ಆಧಾರ್‌ಕಾರ್ಡ್ ಸಂಖ್ಯೆ ಜೋಡಣೆಯನ್ನು ಮಾಡಿಕೊಳ್ಳಬಹುದಾಗಿದೆ. ಆಂಡ್ರಾö್ಯಯ್ಡ್ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ನಿಂದ ವೋಟರ್ ಹೆಲ್ಪ ಲೈನ್ ಆಪ್ ಡೌನ್ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ.
ವೋರ‍್ಸ್ ನೋಂದಣಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಎಲೆಕ್ಟ್ರೋರಲ್ ಅಥೆಂಟಿಕೇಶನ್ ಫಾರಂ ನಂ ೬ಬಿನ್ನು ಆಯ್ಕೆ ಮಾಡಿಕೊಳ್ಳಿ.
ಮೊಬೈಲ್ ನಂಬರ್‌ನ್ನು ಹಾಕಿ, ನಿಮ್ಮ ಆಧಾರ್ ನಂಬರ್‌ನ್ನು ಹಾಕಿ,
ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ. ಪ್ರೋಸೀಡ್‌ನ್ನು ಒತ್ತಿ.
ನಂತರ ಕನ್ಫರ್ಮ ಬಟನನ್ನು ಒತ್ತಿ.
ಸಕ್ಸೆಸ್‌ಫುಲ್ ಅಂತಾ ಒಂದು ರೆಫರೆನ್ಸ್ ಬರುವುದನ್ನು ಖಚಿತಪಡಿಸಿಕೊಳ್ಳಿ.
ಅಥವಾ ನಿಮ್ಮ ಹತ್ತಿರದ ಮತಗಟ್ಟೆಯ ಬಿಎಲೋ ರವರನ್ನು ಭೇಟಿ ಮಾಡಿ, ಆಧಾರ್ ಸಂಖ್ಯೆಯನ್ನು ನೀಡಲು ಕೋರಿದೆ.