ಯಮಕನಮರ್ಡಿ ಕ್ಷೇತ್ರದಲ್ಲಿ ನಮ್ಮವರೇ ನನ್ನ ವಿರುದ್ಧ ಹಣ ಹಂಚಿದ್ದರಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಲು ಕಾರಣವಾಯಿತು. ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದು ಸಧ್ಯ ಸತೀಶ್ ಜಾರಕಿಹೊಳಿ ವಿರುದ್ಧ ಹಣ ಹಂಚಿದ ಕಾಂಗ್ರೆಸ್ ನಾಯಕರು ಯಾರು ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲೀಗ ಪ್ರಾರಂಭವಾಗಿದೆ.
ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿರವರು, ಇದೇ ವೇಳೆ ಕಳೆದ ಬಾರಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಗೆಲುವಿನ ಅಂತರ ಕಡಿಮೆಯಾದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಅದು ಎಂಆರ್‍ಪಿ ಎಂದು ಬಿಜೆಪಿಯವರು ಫಿಕ್ಸ್ ಹಿಡಿದುಕೊಂಡು ಕುಳಿತಿದ್ದಾರೆ. ಆದರೆ ಅದು ಹಾಗಾಗುವುದಿಲ್ಲ. ಇದು ರಾಜಕಾರಣ. ನಾನು ಕಳೆದ ಬಾರಿ ಮತಕ್ಷೇತ್ರಕ್ಕೆ ಹೋಗದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಅದರ ಲೆಕ್ಕ ಭವಿಷ್ಯ ಅವರಿಗೆ ಲೆಕ್ಕವಿಲ್ಲ. 2019ರ ಪಾರ್ಲಿಮೆಂಟ್ ಚುನಾವಣೆಯ ಲಿಸ್ಟ್‍ನ್ನು ಅವರು ನೋಡಬೇಕಿದೆ. ನಮ್ಮ ಬಾಂಬೆ ಕರ್ನಾಟಕದಲ್ಲಿ 56 ಮತಕ್ಷೇತ್ರಗಳಿವೆ. ಈ ಪ್ಲಸ್ ಇರುವಲ್ಲಿ ನಮಗೆ ಇರೋದು ಒಂದೇ ಕ್ಷೇತ್ರ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮೈನಸ್ ನೋಡಿದರೆ ಇತರೆ ಅಭ್ಯರ್ಥಿಗಳಿಗಿಂತ ಕಡಿಮೆ ಇದೆ. ಅವರೆಲ್ಲ ಗೆಲ್ಲುತ್ತಾರೆ.
ನಾನು ಮಾತ್ರ ಸೋಲುತ್ತೇನಾ ಎಂದು ಪ್ರಶ್ನೆ ಮಾಡಿದರು. ನಮ್ಮವರೆಲ್ಲ 40ಸಾವಿರ ಅಂತರದಲ್ಲಿ ಗೆಲ್ಲುತ್ತಾರೆಂದು ಅತಿಯಾದ ಆತ್ಮವಿಶ್ವಾಸದಲ್ಲಿದ್ದರು. ಹಾಗಾಗಿ ನಮ್ಮ ಲೀಡ್ ಕಡಿಮೆಯಾಗಿದೆ. ಇನ್ನು ನಮ್ಮ ಪಕ್ಷದವರಿಂದಲೇ ನನ್ನ ಲೀಡ್ ಕಡಿಮೆಯಾಗಿದೆ. ನಮ್ಮ ಪಕ್ಷದವರೇ ನಮ್ಮ ಕ್ಷೇತ್ರದಲ್ಲಿ ನನ್ನ ವಿರುದ್ಧ ಹಣ ಹಂಚಿದ್ದಾರೆ. ಇದೇ ನನ್ನ ಲೀಡ್ ಕಡಿಮೆಯಾಗಲು ಕಾರಣವಾಯಿತು. ಹಾಗಾಗಿ ನಾವೂ ಹಣ ಕೊಟ್ಟೆವು. ಅವರೂ ಹಣ ಕೊಟ್ಟರು. ಹಾಗಾಗಿ ಅಲ್ಲಿಗೆ ಇಕ್ವಲ್ ಆಯಿತು ಎಂದರು.