ಬೆಂಗಳೂರು: ಪೋಲಿಸರನ್ನು ಕಟ್ಟಿ ಹಾಕಿ ಸರ್ಕಾರ ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸುಳ್ಯದಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಪೋಲಿಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು.
ಆ ವೇಳೆ ಲಾಠಿ ಚಾರ್ಜ್ ಮಾಡಿದ್ದ ಪೊಲೀಸರ ಎತ್ತಂಗಡಿ ಮಾಡಿ ಈ ಸರ್ಕಾರ ತಾವು ಎಂದೆಂದಿಗೂ ಗೂಂಡಾಗಿರಿಯ ಪರ ಎಂದು ತೋರಿಸಿ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿತ್ತು. ಇದೀಗ ಪೊಲೀಸರನ್ನು ಕಟ್ಟಿಹಾಕಿ, ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ ಎಂದು ದೂರಿದೆ.
ಮತ್ತೊಂದು ಟ್ವೀಟ್‌ನಲ್ಲಿ 40 ಪರ್ಸೆಂಟ್ ಸರ್ಕಾರದ ಹುದ್ದೆ ಮಾರಾಟ ಪರ್ವ ಮುಂದುವರಿದಿದೆ. ಪಿಎಸ್‌ಐ ಅಕ್ರಮದಂತೆ ಸಾರಿಗೆ ಇಲಾಖೆ ಬ್ರೇಕ್ ಇನ್ಸ್‌ಪೆಕ್ಟರ್ ಆಯ್ಕೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಸಿಯೇ ಅನರ್ಹರೆಂದು ಗುರುತಿಸಿದ್ದ ಅಭ್ಯರ್ಥಿಗಳನ್ನೇ ಅರ್ಹರೆಂದು ಮುದ್ರೆ ಒತ್ತಿದ್ದೇಕೆ? ಇದರಲ್ಲೂ 40 ಪರ್ಸೆಂಟ್ ವಸೂಲಿ ನಡೆದಿರುವುದು ನಿಶ್ಚಿತ ಎಂದು ಕುಟುಕಿದೆ.