Breaking News

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ ಏಳು ಜನರ ಬಂಧನ

Spread the love

ವಿಜಯಪುರ: ವಿಜಯಪುರ ನಗರ ಹಾಗೂ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ಜನರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಸೇರಿದಂತೆ ಒಟ್ಟು ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

 

ಇಟ್ಟಂಗಿಹಾಳ ದೊಡ್ಡಿಯ ನಿವಾಸಿ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರೆ, ಹಣಮಂತ ಜಯಪ್ಪ ಖರಾತ (20), ಬಬಲಾದಿ ಗ್ರಾಮದ ನಿವಾಸಿ ಸಚಿನ್ ಮಧು ಗೋಪಣೆ (20), ಮಹಾರಾಷ್ಟ್ರದ ತಿಕ್ಕುಂಡಿ ಕರೆವಾಡಿ ಮೂಲದ ನಿವಾಸಿ ನವನಾಥ ಅಮಗೊಂಡ ಕರಾಡೆ (20), ಸಚಿನ್ ವಿಕಾಸ ಕಾಳೆ (21), ವಿಕಾಸ ಲಕ್ಷ್ಮಣ ಢಾಣೆ (20) ಬಂಧಿತರು. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಮಚ್ಚು, ಕುಡಗೋಲು, ಬಡಿಗೆ, ವೈರ್ ಪೈಪ್, ಮೊಬೈಲ್, ಖಾರದ ಪುಡಿ, ಮೂರು ಬೈಕ್ ಸೇರಿದಂತೆ 5.13 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಇಟ್ಟಂಗಿಹಾಳ ಕ್ರಾಸ್ ಹತ್ತಿರ ಆ.8 ರಂದು ಹಾಗೂ ಆ.12 ಹಂಚಿನಾಳ ತಾಂಡಾ ಹತ್ತಿರ ಮೂರು ಬೈಕಗಳ ಮೇಲೆ ಬಂದಿದ್ದ ಆರೇಳು ಜನರ ತಂಡ, ಮಾರಕಾಸ್ತ್ರಗಳಿಂದ ಬೆದರಿಸಿ, ಹಣ,‌ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿದ ಬಗ್ಗೆ ದೂರುಗಳು ದಾಖಲಾಗಿದ್ದವು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಆನಂದಕುಮಾರ, ಡಿಎಸ್ಪಿ ಸಿದ್ದೇಶ್ವರ ಹಾಗೂ ಗ್ರಾಮೀಣ ವಲಯ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.


Spread the love

About Laxminews 24x7

Check Also

ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ

Spread the loveವಿಜಯಪುರ, ಜೂನ್​​ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ