ಬೆಳಗಾವಿಯಿಂದ 18 ಕಿ.ಮೀ. ದೂರದ ಬೆಳವಟ್ಟಿಯಲ್ಲಿ ರವಿವಾರ ಮುಂಜಾನೆ ಚಿರತೆಯು ಕಾಣಿಸಿಕೊಂಡಿದೆ. ಈ ಚಿರತೆ ಬೆಳಗಾವಿ “ಗಾಲ್ಫ ಕ್ಲಬ್ ಚಿರತೆಯೊ ಅಥವಾ ಇದು ಬೇರೆ ಚಿರತೆಯೊ..? ಎಂಬ ಅನುಮಾನ ಮೂಡಿದೆ.
ಹೌದು ಇದೇ ಅಗಸ್ಟ್ 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಮಟ ಮಟ ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡು ಕಟ್ಟಡ ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿ ಮಾಯವಾದ ಚಿರತೆಯ ಶೋಧಕ್ಕಾಗಿ ಅರಣ್ಯ ಇಲಾಖೆಯು ನಡೆಸಿದ ಪ್ರಯತ್ನಗಳಿಗೆ ಇನ್ನೂ ಫಲ ಸಿಕ್ಕಿಲ್ಲ. ಆದರೆ ಇನ್ನೂ ಪ್ರಯತ್ನಗಳು ನಿಂತಿಲ್ಲ. ಚಿರತೆಯ ಭಯದಿಂದಾಗಿ ಮುಚ್ಚಿದ 22 ಶಾಲೆಗಳು ನಿನ್ನೆ ಅಗಸ್ಟ 16ರಂದು ಪುನರಾರಂಭಗೊಂಡಿವೆ. ಆದರೆ ಪಾಲಕರು ಮತ್ತು ಮಕ್ಕಳಲ್ಲಿ ಭಯ ದೂರವಾಗಿಲ್ಲ.
ಶನಿವಾರ ದಿ.13 ರಿಂದ ದಿ.16ವರೆಗೂ ಹಿಂಡಲಗಾ ರಸ್ತೆಯಲ್ಲಿರುವ ಗಾಲ್ಫ ಮೈದಾನದಿಂದ ಚಿರತೆಯು ಅತ್ತಿತ್ತ ಓಡಿದ ಬಗ್ಗೆ ವದಂತಿಗಳು ಹಬ್ಬುತ್ತಲೇ ಇವೆ. ರಾತ್ರಿ 12ರ ಸುಮಾರಿಗೆ ರೇಸ್ ಕೋರ್ಸ ಮೈದಾನದ ಗೋಡೆಯನ್ನು ಹಾರಿ ಹೋಗಿದ್ದನ್ನು ನೋಡಿದ್ದಾಗಿ ಅನೇಕರು ಅನೇಕ ರೀತಿಯಲ್ಲಿ ಹೇಳಿದ್ದಕ್ಕೆ ರೆಕ್ಕೆ ಪುಕ್ಕಗಳು ಬಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿವೆ.
ಇಷ್ಟೇಲ್ಲಾ ಬೆಳವಣಿಗೆ ಆದ ನಂತರ ಇದೀಗ ಬೆಳವಟ್ಟಿಯಲ್ಲಿ ಚಿರತೆ ಕಾಣಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. “ನಾವೇ ಗಂಡ ಹೆಂಡತಿ ಸೇರಿಯೇ ನಮ್ಮ ಹೊಲದಲ್ಲಿ ರವಿವಾರ ಆಗಸ್ಟ್ 14ರಂದು ಮುಂಜಾನೆ ಚಿರತೆಯನ್ನು ನೋಡಿದ್ದೇವೆ. ಮೊಬೈಲ್‍ನಲ್ಲಿ ಫೆÇೀಟೊ ತೆಗೆದಿದ್ದೇವೆ ಎಂದು ಬೆಳವಟ್ಟಿಯ ರೈತ ಶಿವಾಜಿ ನಲವಡೆ ಹೇಳಿದ್ದಾರೆ.
ಇನ್ನು ಬೆಳವಟ್ಟಿ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರಿಗೆ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಫೆÇೀನ್ ಮಾಡಿ ವಿಚಾರಿಸಿದಾಗ ಬೆಳಗಾವಿ ಮತ್ತು ಬೆಳಗಾವಿ ಪಶ್ಚಿಮ ಭಾಗಕ್ಕೆ 18 ಕಿ.ಮೀ.ದೂರದಲ್ಲಿರುವ ಬೆಳವಟ್ಟಿ ಬಳಿಯ ಕವಳೇವಾಡಿ ಕ್ರಾಸ್ ಹತ್ತಿರ ಇರುವ ನಲವಡೆ ಅವರ ಹೊಲದಲ್ಲಿ ಚಿರತೆ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರೂ ದೃಢವಾಗಿಯೇ ಹೇಳುತ್ತಾರೆ. ಶಿವಾಜಿ ನಲವಡೆ ಅವರು ರವಿವಾರ ಮುಂಜಾನೆ ತಮ್ಮ ಪತ್ನಿಯೊಂದಿಗೆ ಹೊಲಕ್ಕೆ ಹೋದಾಗ ಚಿರತೆ ಕಾಣಿಸಿದೆ. ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.