Breaking News

ದಯವಿಟ್ಟು ನಮಗೆ ಮನೆ ಕಟ್ಟಿ ಕೊಡಿ: ಸರ್ಕಾರಕ್ಕೆ ಕಡೋಲಿ ಸಂತ್ರಸ್ತ ಮಹಿಳೆಯರ ಮನವಿ

Spread the love

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ಭಾರಿ ಮಳೆಗೆ ಹಾನಿಗೆ ಒಳಗಾಗಿರುವ ಈ ಎರಡೂ ಮನೆಗಳು ಯಾವಾಗ ಬೇಕಾದ್ರೂ ಬೀಳಬಹುದು. ಜೀವ ಭಯದಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ದಯವಿಟ್ಟು ನಮಗೆ ಮನೆ ಕಟ್ಟಿಸಿ ಕೊಡಿ ಎಂದು ಈ ನೊಂದ ಸಂತ್ರಸ್ತ ಮಹಿಳೆಯರು ಅಂಗಲಾಚುತ್ತಿದ್ದಾರೆ.

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಬದುಕುವುದೇ ದುಸ್ಥರವಾಗಿ ಬಿಟ್ಟಿದೆ. ಮಳೆ ನೀರು ಮನೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೀರಿನಿಂದ ನೆನೆದಿರುವ ಈ ಮನೆಯ ಗೋಡೆಗಳು ಯಾವ ಕ್ಷಣದಲ್ಲಿ ಬೇಕಾದ್ರೂ ಧರೆಗೆ ಉರುಳಬಹುದು. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ವೈಜನಾಥ ಗಲ್ಲಿಯಲ್ಲಿನ ದೃಶ್ಯಗಳನ್ನು. ದೇಮವ್ವ ವಿಠ್ಠಲ ಸಾಯಬಣ್ಣವರ ಎಂಬ ವೃದ್ಧ ಮಹಿಳೆಯ ಮನೆ ನೋಡಿದ್ರೆ

ಮನೆಯ ಒಂದು ಕಡೆಯ ಗೋಡೆ ಈಗಾಗಲೇ ಕುಸಿದು ಬಿದ್ದಿದೆ. ಅಂತಹ ಮನೆಯಲ್ಲಿಯೇ ಈ ಅಜ್ಜಿ ವಾಸ ಮಾಡುತ್ತಿದ್ದಾಳೆ. ಇನ್ನು ಮಂಗಲ ದೇವಪ್ಪ ಪಾಟೀಲ್ ಎಂಬುವವರ ಮನೆ ಕೂಡ ಇದೇ ಪರಿಸ್ಥಿತಿಯಲ್ಲಿದೆ. ಮಳೆ ನೀರು ಮನೆಯೊಳಗೆ ನುಗ್ಗಿದ್ದು, ಮನೆಯಿಂದ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಈ ಮನೆಯು ಕೂಡ ಯಾವ ಕ್ಷಣದಲ್ಲಿ ಬೇಕಾದ್ರೂ ಕುಸಿಯಬಹದು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ