Breaking News

ಮನಃ ಪರಿವರ್ತನೆಗೆ ವಚನಗಳು ಸಹಕಾರಿ; ಡಾ| ಚನ್ನವೀರ ದೇವರು

Spread the love

ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು.

 

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್‌, ಬಸವನಬಾಗೇವಾಡಿಯ ವಿಶ್ವಬಂಧು ಬಸವ ಸಮಿತಿ, ಕುಂಟೋಜಿ ಯಶಸ್ವಿನಿ ಮಹಿಳಾ ಬಳಗದ ಸಹಯೋಗದಲಿ ಕೈದಿಗಳಿಗೆ ಹಮ್ಮಿಕೊಂಡಿದ್ದ ರುದ್ರಾಕ್ಷಿ ದೀಕ್ಷೆ, ವಿಭೂತಿ ವಿತರಣೆ, ವಚನ ಪುಸ್ತಕಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಪ್ಪು ಮಾಡುವುದು ತಪ್ಪಲ್ಲ. ತಪ್ಪು ಅಂತಾ ತಿಳಿದ ಮೇಲೂ ಮಾಡುವ ತಪ್ಪೇ ತಪ್ಪು. ಮಹಾತ್ಮ ಗಾಂಧಿಜಿ ಜೈಲಿನಲ್ಲಿ ಇದ್ದುಕೊಂಡೇ ಆತ್ಮ ಕಥನ ಬರೆದರು. ಸುಭಾಷ್‌ಚಂದ್ರ ಬೋಸ್‌, ಭಗತಸಿಂಗ್‌ ಅವರ ಆದರ್ಶಗಳು, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಿದಲ್ಲಿ ಜೀವನದಲ್ಲಿ ಮಹಾ ಮಾನವರಾಗಲು ಸಾಧ್ಯವಿದೆ ಎಂದು ಮಾರ್ಗದರ್ಶನ ಮಾಡಿದರು.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಜೆ.ಐ. ಮ್ಯಾಗೇರಿ ಮಾತನಾಡಿ, ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆದರದ ಮೇಲೆ ಕೆಲವರು ಈ ವರ್ಷ ಬಿಡುಗಡೆ ಆಗಲಿದ್ದಾರೆ. ಇತರೆ ಕೈದಿಗಳು ಸಹ ಸನ್ನಡನೆ ಮೂಲಕ ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.


Spread the love

About Laxminews 24x7

Check Also

ಹುಕ್ಕೇರಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರೀತವಾಗಿ ವಿಲೆವಾರಿ

Spread the love ಹುಕ್ಕೇರಿ : ತ್ವರೀತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವದು – ನೂತನ ನ್ಯಾಯಾಧೀಶ ಗುರು ಪ್ರಸಾದ ಹುಕ್ಕೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ