Breaking News

ಕುರಿ, ಉಣ್ಣೆ ಅಭಿವೃದ್ಧಿ ನಿಗಮ ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತನೆ: ಬೊಮ್ಮಾಯಿ

Spread the love

ಬೆಂಗಳೂರು: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತಿಸಲು ಅಪೆಕ್ಸ್‌ ಸಂಸ್ಥೆ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಭಾನುವಾರ ನಡೆದ ಕುರಿಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ಡಿ.ಪಿ.ಆರ್‌ ಆಗಿದೆ.

ಶೇ. 25 ಸಹಾಯಧನದ ಜೊತೆಗೆ ಶೇ.50 ಸಾಲ ನೀಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿರುವುದಾಗಿ ಅವರು ತಿಳಿಸಿದರು.

ಇದಕ್ಕಾಗಿ ಕುರಿಗಾಹಿಗಳ ಒಕ್ಕೂಟ ಮತ್ತು ನಿಗಮ ಎರಡನ್ನೂ ಉಪಯೋಗಿಸಿಕೊಳ್ಳಬೇಕು. ಎರಡರ ಸಮನ್ವಯದೊಂದಿಗೆ ಮುನ್ನಡೆಯಬೇಕು. ಯೋಜನೆಯ ಅನುಷ್ಠಾನಕ್ಕೆ ರಚಿಸುವ ಅಪೆಕ್ಸ್‌ ಸಂಸ್ಥೆಯು ನಿಗಮದವರನ್ನೂ ಒಳಗೊಂಡಿರಬೇಕು. ಇದು ಮೊದಲ ಹಂತ. ಇನ್ನೂ ಸುಧಾರಣೆಗೆ ಅವಕಾಶಗಳಿವೆ ಎಂದರು.

ಕೇಂದ್ರ ಸರ್ಕಾರದ ಎನ್‌.ಸಿ.ಡಿ.ಸಿ ಸಾಲ ಪಡೆಯಬಹುದು. ಶೇ.50 ಸಾಲ, ಶೇ.25 ಸಹಾಯಧನವಾದರೆ ಇನ್ನುಳಿದ ಮೊತ್ತವನ್ನು ಕೊಡುಗೆ ರೂಪದಲ್ಲಿ ಪಡೆಯಬೇಕು. ಕೊಡುಗೆ ನೀಡುವ ವಿಚಾರದಲ್ಲಿ ಒಕ್ಕೂಟದ ಕೆಲಸ ಬಹಳ ಮುಖ್ಯ. ಕುರಿಗಾಹಿಗಳನ್ನು ಸದಸ್ಯರನ್ನಾಗಿಸಿಕೊಳ್ಳಬೇಕು. ಇದಕ್ಕಾಗಿ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನವರೊಂದಿಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದರು.

 


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ