ಗಂಗಾವತಿ : ಈ ದೇಶದೆಲ್ಲೆದೆ 75 ಸ್ವಾತಂತ್ರದವರೆಗೆ ಎಲ್ಲಾ ಸರ್ಕಾರಿ ಅರೆಸರ್ಕಾರಿ ಮತ್ತು ರಾಷ್ಟ್ರ ಧ್ವಜ ಕಟ್ಟೆ ಇರುವ ಸ್ಥಳಗಳಲ್ಲಿ ಅಮೃತ ಮಹೋತ್ಸವದ ಸಡಗರದಲ್ಲಿ ಆ.13 ರಿಂದ 15 ರವರೆಗೆ ಪ್ರತಿದಿನ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣವನ್ನು ಬೆಳಿಗ್ಗೆ 6 ರಿಂದ 5.35 ಹೊರಗೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ನಂತರ ಅವರೋಹಣ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಗಂಗಾವತಿ ನಗರದ ಎಂಎನ್ ಎಂ ಬಾಲಕಿಯರ ಕಾಲೇಜು ಆವರಣದಲ್ಲಿರುವ ಕೇಂದ್ರೀಯ ಮಹಾವಿದ್ಯಾಲಯಕ್ಕೆ ಈ ಆದೇಶ ಅನ್ವಯವಾಗುವುದಿಲ್ಲವೇ ಪ್ರಶ್ನೆ ಮೂಡಿದೆ.
ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿರುವ ಎಂಎನ್ ಎಂ ಬಾಲಕಿಯರ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಮತ್ತು ಉರ್ದು ಪ್ರೌಢಶಾಲೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳಲ್ಲಿ ಆ.13 ಮತ್ತು 14 ರಂದು ಬೆಳಿಗ್ಗೆ 6 ಗಂಟೆಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗಿದ್ದರೂ ಕೇಂದ್ರೀಯ ವಿದ್ಯಾಲಯಗಳು ಮಾತ್ರ ರಾಷ್ಟ್ರಧ್ವಜರೋಹಣ ಮಾಡಿಲ್ಲ. ಜೊತೆಗೆ ಆ.13 ರಂದು ಮತ್ತು 14 ರಂದು ದೇಶಾದ್ಯಂತ ರಾಷ್ಟ್ರಧ್ವಜವನ್ನು ಏರಿಸುವ ಮೂಲಕ ದೇಶ ಭಕ್ತಿಯನ್ನು ಮೆರೆದಿದ್ದಾರೆ .
ಆದರೆ ಗಂಗಾವತಿಯ ಕೇಂದ್ರೀಯ ವಿದ್ಯಾಲಯ ಇದಕ್ಕೆ ವಿರುದ್ಧವಾಗಿದೆ . ಈ ಶಾಲೆಯಲ್ಲಿ ಆ.13 ಮತ್ತು 14 ರಂದು ರವಿವಾರ ಬೆಳಿಗ್ಗೆ 8 ಗಂಟೆಯವರೆಗೂ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ . ಈ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ .
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕೇಂದ್ರೀಯ ಮಹಾವಿದ್ಯಾಲಯ ಪ್ರತಿನಿತ್ಯವೂ ರಾಷ್ಟ್ರಧ್ವಜಾರೋಹಣವನ್ನು ಮಾಡುತ್ತದೆ ಶನಿವಾರ ರವಿವಾರ ರಜೆ ಇರುವಾಗ ರಾಷ್ಟ್ರ ಧ್ವಜಾರೋಹಣ ಮಾಡುವುದಿಲ್ಲ .
ಶನಿವಾರ ಕ್ರೀಡಾಕೂಟದ ತಯಾರಿಯಲ್ಲಿದ್ದರಿಂದ ಅದರಲ್ಲಿ ಬ್ಯುಸಿ ಆಗಿದ್ದು ಒತ್ತಡದಿಂದ ತಪ್ಪಾಗಿದ್ದು ರವಿವಾರ ರಾಷ್ಟ್ರ ಧ್ವಜಾರೋಹಣ ಮಾಡುವುದಾಗಿ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರಂಗಪ್ಪ ತಿಳಿಸಿದ್ದಾರೆ .