ಮಂಗಳೂರು: ಒಳ ಉಡುಪಿನ ಕಿಸೆಯೊಳಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನ ಬಳಿಯಿದ್ದ ಒಳ ಉಡುಪಿನ ಪಾಕೆಟ್ನೊಳಗೆ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕನನ್ನು ತಪಾಸಣೆ ನಡೆಸಿದ ವೇಳೆ, ಆತನ ಬ್ಯಾಗ್ನಲ್ಲಿದ್ದ ಒಳ ಉಡುಪಿನ ಹೊಲಿಗೆ ಹಾಕಲಾದ ಪಾಕೆಟ್ನೊಳಗೆ ಚಿನ್ನ ಪತ್ತೆಯಾಗಿದೆ.
24K ನ 831 ಗ್ರಾಂ ಚಿನ್ನ ಈತನ ಬಳಿ ಸಿಕ್ಕಿದ್ದು, ಇದರ ಮೌಲ್ಯ 43,29,510 ರೂ. ಎಂದು ಅಂದಾಜಿಸಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.
Laxmi News 24×7