Breaking News

ಎಲ್ಲಾ ನಿಯಮ ಗಾಳಿಗೆ ತೂರಿ ರಾಷ್ಟ್ರ ಧ್ವಜ ತಯಾರಿಕೆಗೆ ಅವಮಾನ ಮಾಡಲಾಗುತ್ತಿದೆ

Spread the love

ದೇಶಕ್ಕೆ ಈಗ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಆದ್ರೆ ಕೇಂದ್ರ ಸರ್ಕಾರದ ಒಂದು ನಿರ್ಧಾರ ಖಾದಿ ಪ್ರೇಮಿಗಳು ಖಾದಿ ಗ್ರಾಮೋದ್ಯೋಗ ಸಂಸ್ಥೆಗಳ ಪಾಲಿಗೆ ಕಂಟಕವಾಗಿದೆ. ಹರಘರ ತಿರಂಗ ಹೆಸರಿನಲ್ಲಿ ರಾಷ್ಟ್ರ ಧ್ವಜಕ್ಕೆ ಇರುವ ಗೌರವ ಕಡಿಮೆ ಮಾಡಲು ಹೊರಟ್ಟಿರುವದು ಖಾದಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ದೇಶಕ್ಕೆ ಗೌರವ ಸಿಗುವದು ಆ ರಾಷ್ಟ್ರದ ರಾಷ್ಟ್ರ ಧ್ಬಜದಿಂದ.ಅಂತ ಒಂದು ರಾಷ್ಟ್ರ ಧ್ವಜ ತಯಾರಾಗುವದು ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ .ಇಂತ ದೇಶದ ರಾಷ್ಟ್ರದ್ವಜವನ್ನ ಖಾದಿ ಬಟ್ಟೆಯಲ್ಲಿ ನೋಡುವುದೆ ಚಂದ. ಖಾದಿಯಲ್ಲಿ ಮಾಡಿದ ತಿರಂಗ ಕಣ್ಣೇದುರು ಹಾರಾಡ್ತ ಇದ್ರೆ ನೋಡುಗರ ಮನದಲ್ಲಿ ದೇಶಪ್ರೇಮ ಉಕ್ಕಿ ಬರುತ್ತದೆ.ದೇಶವಾಸಿಗಳೊಂದಿಗೆ ಖಾದಿ ಅμÉ್ಟೂಂದು ಭಾವನಾತ್ಮಕವಾಗಿ ಬೆರೆತು ಹೋಗಿದೆ. ಆದ್ರೆ ಇದನ್ನೆಲ್ಲ ಮರೆತಿರುವ ಕೇಂದ್ರ ಸರ್ಕಾರ ಈಗ ರಾಷ್ಟ್ರದ್ವಜವನ್ನ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಿಸುವ ಆದೇಶ ನೀಡಿದೆ.

ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ರ ಕಾಯಿದೆಯನ್ನ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರದ್ವಜವನ್ನ ತಯಾರು ಮಾಡಬಹುದು. ಅμÉ್ಟೀ ಅಲ್ಲದೆ ಮಶೀನ್ ಗಳ ಮೂಲಕ ದ್ವಜ ತಯಾರಿಸಬಹುದೆಂದು ತಿದ್ದುಪಡಿ ತರುವ ಮೂಲಕ ಬಟ್ಟೆ ಮಿಲ್ ಗಳಲ್ಲಿ ಖಾಸಗಿ ಕಂಪನಿಯವರು ಇನ್ನು ಮುಂದೆ ದ್ವಜ ತಯಾರಿಸಬಹುದಾಗಿದೆ. ಇದರಿಂದ ರಾಷ್ಟ್ರ ಧ್ವಜದ ಗೌರವ, ಮಹತ್ವ ಕಡಿಮೆ ಆಗುತ್ತಿದೆ ಎಂದು ಖಾದಿಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ದೇಶದ ಮೂಲೆ ಮೂಲೆಗಿಗೂ ಬೆಂಗೇರಿ ಖಾದಿ ಕೇಂದ್ರದಿಂದಲೇ ದ್ವಜ ಪೂರೈಕೆ ಆಗ್ತಿತ್ತು.

ಕೇಂದ್ರ ಸರ್ಕಾರ ಕಾಯಿದೆಯಲ್ಲಿ ತಿದ್ದುಪಡಿ ತಂದಿದ್ದರಿಂದ ಈ ರಾಷ್ಟ್ರದ್ವಜ ತಯಾರಿಕಾ ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ. ಇದೊಂದು ವ್ಯವಹಾರದ ವಿಷಯವಲ್ಲ. ದೇಶಾಭಿಮಾನದ ಸಂಕೇತ. ದೇಶ ಅಲ್ಲದೆ ವಿದೇಶಾಂಗ, ರಾಯಭಾರ ಕಚೇರಿಗಳಲ್ಲಿ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜ ಹಾರಾಟ ನಡೆಸುತ್ತಿತ್ತು. ಆದರೆ ಈಗ ಎಲ್ಲಾ ನಿಯಮ ಗಾಳಿಗೆ ತೂರಿ ರಾಷ್ಟ್ರ ಧ್ವಜ ತಯಾರಿಕೆಗೆ ಅವಮಾನ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ