Breaking News

ಪಾಟೀಲ್ ಗಲ್ಲಿಯಲ್ಲಿ ಮಳೆ ನೀರು ಮನೆಯೊಳಕ್ಕೆ ನುಗ್ಗಿ ಅವಾಂತರ

Spread the love

ಬೆಳಗಾವಿಯ ಪಾಟೀಲ್‍ಗಲ್ಲಿಯಲ್ಲಿ ಒಳಚರಂಡಿ ಬ್ಲಾಕ್ ಆಗಿರುವ ಕಾರಣ ಮಳೆಯ ನೀರು ಹರಿದು ಹೋಗದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕೆಂದು ಪಾಟೀಲ್ ಗಲ್ಲಿಯ ನಿವಾಸಿ ಮನವಿ ಮಾಡಿದ್ದಾರೆ.

ಹೌದು ಬೆಳಗಾವಿ ನಗರದ ಪಾಟೀಲ್‍ಗಲ್ಲಿಯ ಮನೆ ನಂ 561/62 ರಲ್ಲಿ ಚಿರಾಗ್ ಪೊರ್‍ವಾಲ್ ರವರಿಗೆ ಸೇರಿದ ಮನೆಯಿದೆ. ಇಲ್ಲಿ ಒಳಚರಂಡಿಯಿಲ್ಲದ ಕಾರಣ ನಗರದಲ್ಲಿ ವಿಪರೀತವಾಗಿ ಮಳೆ ಸುರಿದರೆ ನೀರು ಸರಾಗವಾಗಿ ಹರಿದು ಹೋಗದೇ ಮನೆಯೊಳಕ್ಕೆ ನುಗ್ಗಿ ಮನೆಯಲ್ಲಿರುವ ಅನೇಕ ವಸ್ತುಗಳಿಗೆ ಹಾನಿಯುಂಟಾಗುತ್ತಿದೆ. 

ಒಳಚರಂಡಿ ಇಲ್ಲದ ಕಾರಣ ಈ ಏರಿಯಾದಲ್ಲಿ ಪ್ರವಾಹದ ರೀತಿಯಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹಾಗಾಗಿ ನೀರು ಸರಾಗವಾಗಿ ಹರಿದು ಹೋಗಲು ಮುಂದೆ ಒಳಚರಂಡಿ ವ್ಯವಸ್ಥೆಯನ್ನು ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಪಾಟೀಲ್ ಗಲ್ಲಿಯ ನಿವಾಸಿ ಚಿರಾಗ್ ಪೋರ್‍ವಾಲ್‍ರವರು, ಪಾಟೀಲ್‍ಗಲ್ಲಿಯಲ್ಲಿ ಹೆಚ್ಚಾಗಿ ಮಳೆಯಾದರೆ ಸಾಕು ನಮ್ಮ ಮನೆಯಲ್ಲಿ ನೀರು ಬಂದು ಬಿಡುತ್ತೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮನೆಯಲ್ಲಿ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಹಾಳಾಗುತ್ತಿವೆ. 


Spread the love

About Laxminews 24x7

Check Also

ಒಂದೇ ತಿಂಗಳಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಎರಡು ಬಾರಿ ರೌಡಿಗಳ ಪರಿಶೀಲನೆ ನಡೆಸಿದ್ದಾರೆ.

Spread the loveಬೆಳಗಾವಿ: ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿರುತ್ತಾರೆ. ಅದಾದ ಬಳಿಕ‌ವೂ ಯಾವುದಾದ್ರೂ ಪ್ರಕರಣಗಳಲ್ಲಿ ಅವರ ಪಾತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ