ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಮೇಯರ್, ಉಪಮೇರ್ ಆಗಿರುವ ಸ್ಥಳೀಯ ಬಿಜೆಪಿ ಶಾಸಕರಿಗೆ ಆ.9 ರಂದು ಕಾಂಗ್ರೆಸ್ ನಿಂದ ಗೌನ್ ಉಡುಗರೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
: ಇಂದು ಶನಿವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರು, ವಿಧಾನ ಸಭೆಯ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ ಸ್ಥಳೀಯ ಶಾಸಕರು ಮೇಯರ್, ಉಪಮೇಯರ್ ಆಗಿದ್ದಾರೆ. ಅವರಿಗೆ ಆ.9 ರಂದು ಬೆಳಗಾವಿಗೆ ಬರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಮೇಯರ್, ಉಪಮೇಯರ್ ಗೌನ್ ಉಡುಗೊರೆ ಕಳುಹಿಸಿ ಕೊಡಲಾಗುವುದು.
ಪಾಲಿಕೆಯ ಬಿಜೆಪಿ ಸದಸ್ಯರೇ ಮೇಯರ್, ಉಪಮೇಯರ್ ಆಯ್ಕೆಯಾಗದಿದ್ದಕ್ಕೆ ಅಸಮಾಧಾನ ಇದ್ದಾರೆ ಎನ್ನುವ ಮಾಹಿತಿ ಇದೆ. ಪಾಲಿಕೆಯ ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತೇವೆ ಎಂದು ನಮ್ಮ ಬಳಿ ಬಂದಿಲ್ಲ. ಅವರು ಚರ್ಚೆ ನಡೆಸಿರುವ ಮಾಹಿತಿ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Laxmi News 24×7