Breaking News

ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಆಂಬುಲೆನ್ಸ್ ದೇಣಿಗೆ ನೀಡಿದ ನಟ ಪ್ರಕಾಶ್‌ ರಾಜ್

Spread the love

ಮೈಸೂರು, ಆಗಸ್ಟ್‌ 6: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ‘ಅಪ್ಪು ಎಕ್ಸ್‌ಪ್ರೆಸ್’ ಆಂಬುಲೆನ್ಸ್ ಅನ್ನು ಮಿಷನ್‌ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ.

ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ ಅವರ ಅಭಿಮಾನಿ ಸಂಘಗಳು, ಅವರ ಪೋಸ್ಟರ್‌ಗಳು, ಅವರ ಹೆಸರಿನ ರಸ್ತೆಗಳು ಅವರ ಹಿರಿಮೆ ಸಾರುತ್ತಿದೆ. ಇಂತಹ ಅಪ್ಪು ನೆನಪಿಗೆ ಸಮಾಜಕ್ಕೆ ಏನಾದರೂ ಸೇವಾ ಕಾರ್ಯ ಮಾಡಬೇಕೆಂಬ ಉದ್ದೇಶದಿಂದ ಆಸ್ಪತ್ರೆಗೆ ಆಂಬುಲೆನ್ಸ್ ನೀಡುತ್ತಿದ್ದೇನೆ ಎಂದರು.


Spread the love

About Laxminews 24x7

Check Also

ಜೇನುಗಳಿಂದ ಇಪ್ಪತ್ತು ಮಕ್ಕಳ ಪ್ರಾಣ ಉಳಿಸಿ ತಾನು ಜೀವಕೊಟ್ಟ ಮಹಾತಾಯಿ.

Spread the love ಜೇನುಗಳಿಂದ ಇಪ್ಪತ್ತು ಮಕ್ಕಳ ಪ್ರಾಣ ಉಳಿಸಿ ತಾನು ಜೀವಕೊಟ್ಟ ಮಹಾತಾಯಿ. ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಅಂಗನವಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ