ಲೋಡ್ ಲಾರಿಯೊಂದು ನಾಲಾ ಬ್ರಿಡ್ಜ್ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ನಾಲಾ ಕುಸಿದುಗೊಂಡ ಘಟನೆ ಹುಬ್ಬಳ್ಳಿಯ ತುಮಕೂರು ಓಣಿ ನಾಲಾ ಬ್ರಿಡ್ಜ್ ಬಳಿ ನಡೆದಿದೆ.
ಹುಬ್ಬಳ್ಳಿಯ ವಾರ್ಡ್ ನಂ. 65 ರಲ್ಲಿ ಬರುವ ತುಮಕೂರ ಓಣಿಯಲ್ಲಿ ಲೋಡ್ ಲಾರಿಯಿಂದ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
ಲಾರಿಯ ಭಾರವನ್ನು ತಾಳಲಾರದೆ ಕುಸಿದು ಸಿಕ್ಕಾಕಿಕೊಂಡಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು , ಲಾರಿಯನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.