ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಕಾರ್ಯಮಾಡುತ್ತಿದೆ ಎಂದು ಬ್ಯಾಂಕ್‍ನ ಎಂಡಿ ಮಹಾಬಳೇಶ್ವರ್ ರವರು ತಿಳಿಸಿದ್ದಾರೆ.
: ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ.
ನಾವು ಠೇವಣಿ ದಾರರಿಂದ ಬಂದ ಠೇವಣಿ ಹಣವನ್ನು ಸಾಲಗಾರರಿಗೆ ನೀಡಿ ಅದರಿಂದ ಸಾಲಗಾರರಿಗೂ ಒಳ್ಳೆಯದಾದರೆ ಉತ್ತಮವಾಗುತ್ತದೆ. ಇದರಿಂದ ಬ್ಯಾಂಕ್‍ಗೂ ಕೂಡ ಉತ್ತಮವಾಗುತ್ತದೆ. ಹಾಗಾಗಿ ಬ್ಯಾಂಕಿನ ಗ್ರಾಹಕರಿಗೂ ಕೂಡ ಇದರ ಕುರಿತಂತೆ ಸ್ವಲ್ಪ ಮಾಹಿತಿಯನ್ನು ನೀಡುವುದು ಅವಶ್ಯವಾಗುತ್ತದೆ.
ಇದೇ ಭಾಗದವರಾದ ಡಾ. ಗುರುರಾಜ್ ಕರ್ಜಗಿರವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಸಾಕಷ್ಟು ಸೆಮಿನಾರ್‍ಗಳನ್ನು ನಡೆಸಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಹಾಗಾಗಿ ನಾವೂ ನಮ್ಮ ಕರ್ನಾಟಕ ಬ್ಯಾಂಕ್ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಹಕರಿಗೆ ತಿಳಿಸುತ್ತಿದ್ದೇವೆ. ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ಹಣಕಾಸಿನ ಶಿಕ್ಷಿತರ ಕೇಂದ್ರಗಳನ್ನು ಮಾಡಿ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತದೆ. ಇದೇ ರೀತಿ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಈ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ಬ್ಯಾಂಕಿಂಗ್‍ನಲ್ಲಿ ಗ್ರಾಹಕರಿಗೆ ಸಿವಿಲ್ ಸ್ಕೋರ್ ಕುರಿತಂತೆ ಮಾಹಿತಿ ನೀಡಿ ಅವರಿಗೆ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಲಾಗುತ್ತಿದೆ. ಈ ಮೂಲಕ ಎಲ್ಲಾ ಗ್ರಾಹಕರು ಜಾಗೃತ ಗ್ರಾಹಕರಾಗಬೇಕೆಂಬ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.