ನವದೆಹಲಿ: ಮುಂದಿನ 6 ತಿಂಗಳಲ್ಲಿ ಫಾಸ್ಟಾಗ್ ವ್ಯವಸ್ಥೆ ಕೊನೆಯಾಗಲಿದೆಯೇ? ರಾಜ್ಯಸಭೆಯಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಡಿರುವ ಮಾತು ಇಂಥದ್ದೊಂದು ಸುಳಿವು ನೀಡಿದೆ.
ನಾವು ಫಾಸ್ಟ್ಯಾಗ್ ಬದಲು ಜಿಪಿಎಸ್ ವ್ಯವಸ್ಥೆ ಪರಿಚಯಿಸುವ ಕುರಿತು ಚಿಂತನೆ ನಡೆಸಿದ್ದೇವೆ.
ನಮ್ಮ ಮುಂದೆ 2 ಆಯ್ಕೆಗಳಿವೆ.
ಒಂದನೆಯದು, ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ. ಇಲ್ಲಿ ಕಾರಿನಲ್ಲೇ ಜಿಪಿಎಸ್ ಅಳವಡಿಸಲಾಗುತ್ತದೆ. ಕಾರು ಟೋಲ್ ಪ್ಲಾಜಾ ದಾಟಿದ ತಕ್ಷಣ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತ ಕಡಿತಗೊಳ್ಳುತ್ತದೆ.
ಇನ್ನೊಂದು, ನಂಬರ್ ಪ್ಲೇಟ್ ತಂತ್ರಜ್ಞಾನ. ಇಲ್ಲಿ ಟೋಲ್ ಪ್ಲಾಜಾಗಳ ಅಗತ್ಯವಿರುವುದಿಲ್ಲ. ನಂಬರ್‌ಪ್ಲೇಟ್‌ನ ಫೋಟೋ ಸೆರೆಯಾದೊಡನೆ, ಅತ್ಯಾಧುನಿಕ ಕಂಪ್ಯೂಟರೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಹಣ ಕಡಿತಗೊಳ್ಳುತ್ತದೆ.
ಹೀಗಾದಾಗ ಟೋಲ್‌ನಲ್ಲಿ ಕ್ಯೂ ನಿಂತು ಕಾಯುವ ಅಗತ್ಯವಿರುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಆದರೆ, ಇದೆಲ್ಲವೂ ಸಂಸತ್‌ನಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆದ ಬಳಿಕವಷ್ಟೇ ಜಾರಿಗೆ ಬರಲಿದೆ ಎಂದೂ ತಿಳಿಸಿದ್ದಾರೆ.
Laxmi News 24×7