Breaking News

ಪೊಲೀಸರ ಸೋಗಿನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದಚಿನ್ನದ ಸರ ಎಗರಿಸಿದ

Spread the love

ಪೊಲೀಸರ ಸೋಗಿನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದಚಿನ್ನದ ಸರ ಎಗರಿಸಿದ ಮತ್ತು ವಿವಿಧಜ್ವೇಲರಿ ಶಾಪ್‍ಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ವಂಚಸಿದ 2 ನಯವಂಚಕ ಆರೋಪಿಗಳನ್ನು 22 ಲಕ್ಷರೂಪಾಯಿ ಮೌಲ್ಯದಚಿನ್ನದೊಂದಿಗೆ ಬಂಧಿಸಲಾಗಿದೆ.

ಸುದ್ಧಿಗೋಷ್ಟಿಯಲ್ಲಿ ಬೆಳಗಾವಿ ಎಸ್‍ಪಿ ಸಂಜೀವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.ಕಳೆದ ತಿಂಗಳು ಹುಕ್ಕೇರಿ ಪಟ್ಟಣದಕೋರ್ಟ್ ಸರ್ಕಲ್ ಬಳಿ ಒಬ್ಬ ಮಹಿಳೆಗೆ ಪೊಲೀಸರೆಂದು ಪುಸಲಾಯಿಸಿ ಆಕೆಯ ಬಳಿಯಿಂದ ಚಿನ್ನದ ಮಂಗಳಸೂತ್ರವನ್ನು ಎಗರಿಸಲಾಗಿತ್ತು.

ಅಲ್ಲದೇ ಬೆಳಗಾವಿ ನಗರದಲ್ಲಿ ವಿವಿಧಜ್ವೇಲರಿ ಶಾಪ್‍ಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ವಂಚಸಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು.ಅಲ್ಲದೇ ಮಹಾರಾಷ್ಟ್ರ ವೆಂಗುರ್ಲಾ, ಕೊಲ್ಹಾಪುರ ನಗರ, ಸೊಲ್ಹಾಪುರ ಹಾಗೂ ಇಂಚಲಕರಂಜಿಯಲ್ಲಿಯೂ ವಂಚನೆ ಮಾಡಿದ್ದರು.

ಈ ಇಬ್ಬರು ಆರೋಪಿಗಳನ್ನು ಒಟ್ಟು 22,73,400ರೂ. ಮೌಲ್ಯದ 421 ಗ್ರಾಂ.ನ ಚಿನ್ನಾಭರಣ ಹಾಗೂ 35 ಸಾವಿರ ಮೌಲ್ಯದ ದ್ವಿಚಕ್ರ ವಾಹನದೊಂದಿಗೆ ಬಂಧಿಸಿ ನ್ಯಾಯಲಯದಲ್ಲಿ ಹಾಜರುಪಡಿಸಿಲಾಗಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ