ಆಸ್ತಿ ವಿಚಾರವಾಗಿ ಮಾತನಾಡುವುದಿದೆ ಬಾ ಎಂದು ಕರೆದು ಹಿರಿಯರ ಸಮ್ಮುಖದಲ್ಲಿಯೇ ಗಂಡ ಹೆಂಡತಿಯನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆ ಬೆಳಗಾವಿಯ ಅಂಕಲಗಿ ಮದುವಾಲ್‍ನಲ್ಲಿ ನಡೆದಿದೆ.
ಅಂಕಲಿಗಿಯ ಮದುವಾಲ್ ಗ್ರಾಮದಲ್ಲಿ ಜಮೀನು ಹಂಚಿಕೆ ವಿಚಾರವಾಗಿ ಎರಡು ಕುಟುಂಬಗಳಲ್ಲಿ ವಿವಾದ ಉಂಟಾಗಿದೆ. ಈ ವೇಳೆ ಹಿರಿಯರು ಕೂಡಿದ್ದಾರೆ ಬಾ ಎಂದು ಕರೆದು ಸವಿತಾ ಹಾಗೂ ಬಸಣ್ಣಿ ಸುತಗಟ್ಟಿ ಎಂಬ ದಂಪತಿಗಳನ್ನು ಹಿರಿಯರ ಸಮ್ಮುಖದಲ್ಲಿ ಮಾರಣಾಂತಿಕವಾಗಿ ಥಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಾಳು ಸವಿತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮದುವಾಲ್ ಗ್ರಾಮದಲ್ಲಿ ಬಸವಣ್ಣಿ ಸುತಗಟ್ಟಿ ಎಂಬುವರ ಮನೆತನದಲ್ಲಿ ಜಮೀನು ಹಂಚಿಕೆ ಕುರಿತಂತೆ ಗೊಂದಲ ಉಂಟಾಗಿತ್ತು.
ಈ ಕುರಿತಂತೆ ಮನೆಯಲ್ಲಿ ರವಿವಾರ ದಿನಾಂಕ 31 ರಂದು ರಾತ್ರಿ 10 ಗಂಟೆಗೆ ಜಮೀನು ಹಂಚಿಕೆ ವಿಚಾರವಾಗಿ ಮನೆಯಲ್ಲಿ ಹಿರಿಯರು ಸೇರಿದ್ದಾರೆ ಬಾ ಎಂದು ಶಂಕರ್ ಸುತಗಟ್ಟಿ ಬಸಣ್ಣಿಯನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು.
Laxmi News 24×7