ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ವಿಶೇಷ ಪ್ರಯತ್ನದಿಂದ ೨೦೧೯ – ೨೦ ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ೧೬.೫೦ ಲಕ್ಷ ರೂ ಮೊತ್ತದಲ್ಲಿ ಸುಸಜ್ಜಿತವಾದ ಜನರ ಹಿತಕ್ಕಾಗಿ ಉಚಿತ ಆಂಬುಲೆನ್ಸ್ ಸೇವೆಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಚಾಲನೆಯನ್ನು ನೀಡಿದರು.
ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ವಿಶೇಷ ಪ್ರಯತ್ನದಿಂದ ೧೦ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಂಸದರ ನಿಧಿಯಿಂದ ೧ ಕೋಟಿ ೬೮ ಲಕ್ಷ ರೂ. ಗಳಲ್ಲಿ ೧೦ ಆ್ಯಂಬುಲೆನ್ಸ್ಗಳನ್ನು ಹಸ್ತಾಂತರಿಸಲಾಗಿದೆ.