Breaking News

ವಿಕ್ರಾಂತ್ ರೋಣ’ ಸಿನಿಮಾ ರಿವ್ಯೂ ಔಟ್..!‌ ಜಗತ್ತಿನಾದ್ಯಂತ ಕಿಚ್ಚನ ಸುನಾಮಿ..

Spread the love

ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಬರೀ ‘ವಿಕ್ರಾಂತ್ ರೋಣ’.. ‘ವಿಕ್ರಾಂತ್ ರೋಣ’ .. ‘ವಿಕ್ರಾಂತ್ ರೋಣ’.. ಅರೆರೆ ಇದು ಇರಲೇಬೇಕಲ್ವಾ..? ಯಾಕಂದ್ರೆ ‘ವಿಕ್ರಾಂತ್ ರೋಣ’ ಇಟ್ಟಿರೋ ಹವಾ ಅಂತಹದ್ದು. ಇದು ಬರೀ ಹವಾ ಮಾತ್ರ ಅಲ್ಲ ಕನ್ನಡ ಸಿನಿಮಾಗಳ ತಾಕತ್ತು ಈ ‘ವಿಕ್ರಾಂತ್ ರೋಣ’ ಎನ್ನಬಹುದು.

ಯಾಕಂದ್ರೆ ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಸಿನಿಮಾದ ರಿವ್ಯೂವ್‌ ಔಟ್‌ ಆಗಿದ್ದು, ‘ವಿಕ್ರಾಂತ್ ರೋಣ’ ಸುನಾಮಿ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ.

 

 

‘ವಿಕ್ರಾಂತ್ ರೋಣ’ ಪದ ಕಿವಿಗೆ ಬಿದ್ದ ತಕ್ಷಣ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರು ಎದೆಯುಬ್ಬಿಸಿ, ಇದು ನಮ್ಮ ಸಿನಿಮಾ ಅಂತಾರೆ. ಯಾಕಂದ್ರೆ ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ಸೃಷ್ಟಿಸಿರುವ ಹವಾನೆ ಅಂತಹದ್ದು. ಕಳೆದ ಹಲವು ತಿಂಗಳಿಂದ ಕಿಚ್ಚನ ಅಭಿಮಾನಿಗಳು ಈ ದಿನಕ್ಕಾಗಿಯೇ ಕಾಯುತ್ತಾ ಕುಳಿತಿದ್ದರು. ಆ ದಿನ ಇದೀಗ ಬಂದೇ ಬಿಟ್ಟಿದೆ. ನಟ ಕಿಚ್ಚ ಸುದೀಪ್‌ ಅವರ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದ್ದು, ಸಿನಿಮಾ ಹೇಗಿದೆ ಅನ್ನೋದರ ರಿವ್ಯೂ ಇದೀಗ ಅಕ್ಷರಶಃ ಸುನಾಮಿ ಎಬ್ಬಿಸಿದೆ.ಹಲವು ಕಡೆ ‘ವಿಕ್ರಾಂತ್ ರೋಣ’ ಚಿತ್ರದ ರಿವ್ಯೂ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಸೃಷ್ಟಿಸಿದೆ. ಎಲ್ಲಿ ನೋಡಿದರೂ ‘ವಿಕ್ರಾಂತ್ ರೋಣ’ ಹಾಗೂ ಕಿಚ್ಚ ಸುದೀಪ್‌ ಹವಾ ಜೋರಾಗಿದೆ. ಇದನ್ನೆಲ್ಲಾ ನೋಡ್ತಾ ಇದ್ರೆ ಕನ್ನಡದ ಮತ್ತೊಂದು ಸಿನಿಮಾ ಸಾವಿರ ಕೋಟಿ ರೂಪಾಯಿ ಬಾರ್ಡರ್ ದಾಟೋದು ಪಕ್ಕಾ ಅಂತಿದ್ದಾರೆ ಕಿಚ್ಚ ಸುದೀಪ್‌ ಅಭಿಮಾನಿಗಳು.


Spread the love

About Laxminews 24x7

Check Also

ಸು ಫ್ರಮ್ ಸೋ’ ಸಿನಿಮಾ (Su From So Movie) ಮೂರನೇ ವಾರಕ್ಕೆ ಕಾಲಿಟ್ಟಿದೆ

Spread the loveಸು ಫ್ರಮ್ ಸೋ’ ಸಿನಿಮಾ (Su From So Movie) ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಚ್ಚರಿಯ ವಿಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ