ಜಮೀನಿನ ಪಂಪ್ ಸೆಟ್‍ಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ರೈತರು ಧರ್ಮದೇಟು ನೀಡಿರುವ ಘಟನೆ ಗೋಕಾಕ್‍ನ ಭಗೀರಥ ಕಾಲೋನಿಯಲ್ಲಿ ನಡೆದಿದೆ.
ಜಮೀನಿನ ಪಂಪ್ ಸೆಟ್‍ನಲ್ಲಿ ಇರೋ ಕೇಬಲ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ತಾಮ್ರದ ತಂತಿಯನ್ನು ಹೆಚ್ಚಿನ ಹಣಕ್ಕೆ ಈ ಖದೀಮರು ಮಾರಾಟ ಮಾಡುತ್ತಿದ್ದರು.
ಕಳೆದ ಅನೇಕ ದಿನಗಳಿಂದ ಈ ರೀತಿ ಕೇಬಲ್ ಕಳ್ಳತನ ನಡೆದಿತ್ತು. ಇದರಿಂದ ಕಂಗೆಟ್ಟಿದ್ದ ರೈತರು ಇಂದು ಇಬ್ಬರು ಕಳ್ಳರನ್ನು ಹಿಡಿದು ಕೈಗೆ ಹಗ್ಗ ಕಟ್ಟಿ ಧರ್ಮದೇಟು ನೀಡಿದ್ದಾರೆ. ಬಳಿಕ ಈ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.