ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾಡಿದ ಕಲಾಸೇವೆ ಒಂದೆಡೆಯಾದರೆ, ಅವರ ಸಮಾಜಮುಖಿ ಕೆಲಸಗಳು ಅದೆಷ್ಟೋ ಯುವಕರ ಪ್ರೇರಣೆಗೆ ಕಾರಣವಾಗಿದೆ.
ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅವರನ್ನು ಯುವರಾಜ್‌ಕುಮಾರ್‌ರಲ್ಲಿ ಕಾಣುತ್ತಿದ್ದಾರೆ.
ಇತ್ತ ಅಣ್ಣಾವ್ರ ಮೊಮ್ಮಗ ಕೂಡ ಅಪ್ಪು ಅಭಿಮಾನಿಗಳನ್ನು ತನ್ನ ಅಭಿಮಾನಿಗಳು ಅಂತಲೇ ನೋಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಹೋದಲ್ಲೆಲ್ಲಾ ಪವರ್‌ಸ್ಟಾರ್ ಅಭಿಮಾನಿಗಳು ಅವರೊಂದಿಗೆ ಮಾತಾಡಲು ತವಕಿಸುತ್ತಿದ್ದಾರೆ.
ಇತ್ತೀಚೆಗೆ ಯುವರಾಜ್‌ಕುಮಾರ್ ಹೊಸಪೇಟೆಗೆ ಭೇಟಿ ನೀಡಿದ್ದರು. ಈ ವೇಳೆ ಅಪ್ಪು ಪುತ್ಥಳಿ ಮುಂದೆ ನಿಂತು ಗೌರವ ಸಲ್ಲಿಸಿ ಬಂದಿದ್ದಾರೆ. ಇದೇ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
Laxmi News 24×7