Breaking News

ಹೆಂಡ್ತಿಯ ರೀಲ್ಸ್​ ಹುಚ್ಚಿಗೆ ಗಂಡ ಬಲಿಯಾದ..!

Spread the love

ಇತಿ-ಮಿತಿಯಲ್ಲಿ ಇಲ್ಲದಿದ್ದರೆ ಸೋಷಿಯಲ್ ಮೀಡಿಯಾ ಕೂಡ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಏಕೆಂದರೆ ಹೆಂಡತಿಯು ತನ್ನ ಇನ್​ಸ್ಟಾಗ್ರಾಮ್ ರೀಲ್ಸ್​ ಹುಚ್ಚಿಗೆ ಗಂಡನನ್ನು ಬಲಿಕೊಟ್ಟಿದ್ದಾಳೆ. ರಾಜಸ್ಥಾನದ ಜೋಧ್​ಪುರದ ಲುನಿ ಎಂಬಲ್ಲಿ ಇಂತಹದೊಂದು ಆಘಾತಕಾರಿ ಘಟನೆ ನಡೆದೆ. ದಿನಗಳ ಹಿಂದೆಯಷ್ಟೇ ಜೋಧಪುರದ ಪ್ರಮುಖ ರಸ್ತೆಯಲ್ಲಿ ಆ್ಯಕ್ಸಿಡೆಂಟ್ ಮೂಲಕ ಡಬಲ್ ಮರ್ಡರ್ ನಡೆದಿತ್ತು. ಈ ಕೊಲೆಯನ್ನು ನೋಡಿದ ಪ್ರತಿಯೊಬ್ಬರೂ ಪ್ರೀ ಪ್ಲ್ಯಾನ್ ಮರ್ಡರ್ ಎಂದೇ ಉದ್ದರಿಸಿದ್ದರು. ಆದರೆ ಯಾಕಾಗಿ ಈ ಕೊಲೆ ನಡೆದಿದೆ ಎಂಬುದೇ ಎಲ್ಲರನ್ನು ಕಾಡಿದ ಪ್ರಶ್ನೆಯಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.

ಈ ಘಟನೆಯಲ್ಲಿ ಮೃತಪಟ್ಟಿರುವ ರಮೇಶ್ ಪಟೇಲ್ ಅವರ ಪತ್ನಿ ಪ್ರೇಮಿಕಾ ಗುಡ್ಡಿ ಫೇಸ್ ಬುಕ್ ಮತ್ತು ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡುತ್ತಿದ್ದರು. ಆದರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದ ಹೆಂಡತಿಯ ನಡೆಯಿಂದ ರಮೇಶ್ ಪಟೇಲ್ ಬೆಸೆತ್ತಿದ್ದರು. ಹಲವು ಬಾರಿ ಬುದ್ದಿವಾದ ಹೇಳಿದರೂ ಕೇಳುವ ಜಾಯಮಾನ ಹೆಂಡತಿಯದ್ದಾಗಿರಲಿಲ್ಲ. ಹೀಗಾಗಿ ಪದೇ ಪದೇ ಇಬ್ಬರ ನಡುವೆ ಇದೇ ವಿಚಾರದಿಂದ ಸಣ್ಣ ಪುಟ್ಟ ಜಗಳಗಳಾಗುತ್ತಿತ್ತು.

ಗಂಡ ಇದ್ದರೆ ತನ್ನ ಸೋಷಿಯಲ್ ಮೀಡಿಯಾ ಹುಚ್ಚಾಟಕ್ಕೆ ಅವಕಾಶವಿಲ್ಲ ಎಂದರಿತು ಪ್ರೇಮಿಕಾ ಗಂಡನನ್ನೇ ಮುಗಿಸಲು ಪ್ಲ್ಯಾನ್ ರೂಪಿಸಿದ್ದಳು. ಇದರ ನಡುವೆ ಪ್ರೇಮಿಕಾಗೆ ಶಂಕರ್ ಪಟೇಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಬೆಳೆದಿದೆ. ಅತ್ತ ಶಂಕರ್​ಗೆ ಪ್ರೇಮಿಕಾ ಬೇಕಿದ್ದರೆ, ಇತ್ತ ಪ್ರೇಮಿಕಾಗೆ ಗಂಡ ರಮೇಶ್ ಪಟೇಲ್ ದೂರವಾಗಬೇಕಿತ್ತು. ಹೀಗಾಗಿ ಗಂಡನನ್ನೇ ಮುಗಿಸಲು ತನ್ನ ಪ್ರಿಯತಮನಿಗೆ ತಿಳಿಸಿದಳು.

ಇತ್ತ ಕಾಮದ ಅಮಲಿನಲ್ಲಿದ್ದ ಶಂಕರ್ ಪಟೇಲ್ ಕೊಲೆಗೆ ಸ್ಕೆಚ್ ರೂಪಿಸಿ ದೆಹಲಿಯಿಂದ ಹಳೆಯ ಎಸ್​ಯುವಿ ಕಾರೊಂದನ್ನು ಖರೀದಿಸಿದ್ದ. ಅಲ್ಲದೆ ರಮೇಶ್ ಪಟೇಲ್​ ಅವರ ಚಲನವಲನಗಳ ಬಗ್ಗೆ ಪ್ರೇಮಿಕಾಳಿಂದ ಅಪ್​ಡೇಟ್ ಪಡೆದುಕೊಳ್ಳುತ್ತಿದ್ದ. ಅದರಂತೆ ಜುಲೈ 17 ರಂದು ರಮೇಶ್ ಪಟೇಲ್ ತನ್ನ ಸೋದರಸಂಬಂಧಿ ಕವಿತಾರನ್ನು ಕರೆದುಕೊಂಡು ಲುನಿಯಿಂದ ಜೋಧ್‌ಪುರಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಲುನಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ಹೊರಡುತ್ತಿದ್ದಂತೆಯೇ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಸುಮಾರು 200 ಮೀಟರ್‌ ವರೆಗೆ ಇಬ್ಬರನ್ನು ಕಾರು ಎಳೆದೊಯ್ದಿದೆ. ಪರಿಣಾಮ ರಮೇಶ್ ಹಾಗೂ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ