ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕೇವಲ ದಕ್ಷಿಣ ನಮ್ಮ ಟಾರ್ಗೆಟ್ ಅಲ್ಲ. ಸವದತ್ತಿ, ರಾಯಬಾಗ, ಹಾರೋಗೇರಿ ಎಲ್ಲಾ ಕಡೆಗಳಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಸಭೆಗಳನ್ನು ಮಾಡುತ್ತಿದ್ದೇವೇ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ರವರು, ಅಭ್ಯರ್ಥಿ ಯಾರು ಎಂದು ಆಮೇಲೆ ನೋಡೋಣ. ಮೊದಲು ಪಕ್ಷ ಸಂಘಟನೆ ಮಾಡೊಣ. ಮತ ಬ್ಯಾಂಕ್ ಕಟ್ಟಿ ಮಾಡಿಕೊಳ್ಳಲು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರ ವೈಫಲ್ಯ ಜನರಿಗೆ ಹೇಳುವ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ೧೮ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡುತ್ತೇವೆ. ದಕ್ಷಿಣ ಕ್ಷೇತ್ರದ ಮತ ಹೆಚ್ಚು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ.
ಬೇಸ್ ಗಟ್ಟಿ ಇದ್ರೆ ಕ್ಯಾಡಿಡೇಟ್ ಬರ್ತಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರ ಸೋಲು ಅಭ್ಯರ್ಥಿ ಬೇರೆ ಬೇರೆ ಆಗಿದ್ದು. ಇಲ್ಲಿ ಮೂರು ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ ಎಂದರು.
ಇದೇ ವೇಳೆ ಪಕ್ಷದ ಅಧ್ಯಕ್ಷ ಬದಲಾವಣೆ ಚರ್ಚೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಅಧ್ಯಕ್ಷರ ಬದಲಾವಣೆ ಸಧ್ಯಕ್ಕಿಲ್ಲ. ಮಹಾನಗರ ಕಾಂಗ್ರೆಸ್ ಅಧ್ಯಕ್ಷರು ಸಭೆ ಗೈರು ವಿಚಾರವಾಗಿ ನಾವು ಅವರಿಗೆ ಮೊದಲೇ ಹೇಳಿದ್ದೇವೆ. ನೀವು ಬೆಳಗಾವಿ ಉತ್ತರ ಕ್ಷೇತ್ರ ನೋಡಿಕೊಳ್ಳಿ. ನಾವು ಬೆಳಗಾವಿ ದಕ್ಷಿಣ ಮತಕ್ಷೇತ್ರ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಸಹ ಚರ್ಚೆ ಆಗಿದೆ ಎಂದರು.