Breaking News

ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಕರ್ನಾಟಕದ ಸಂಸದೆ ಆಗ್ತಾರಂತೆ!

Spread the love

ನಟಿ ರಶ್ಮಿಕಾ ಮಂದಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಪಕ್ಷ, ಸ್ಥಾನ ಸೇರಿದಂತೆ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗುತ್ತಾರೆ ಎಂದು ಹೇಳಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರ ಇತ್ತೀಚಿನ ಮಾತುಗಳು ವೈರಲ್ ಆಗಿವೆ.

ಸೆಲೆಬ್ರಿಟಿಗಳ ಪರ್ಸನಲ್ ವಿಚಾರಗಳ ಬಗ್ಗೆ ವೇಣು ಸ್ವಾಮಿ ಅವರ ಇತ್ತೀಚಿನ ವಿಡಿಯೋ ವೈರಲ್ ಆಗುತ್ತಿದೆ. ಇಂಡಸ್ಟ್ರಿಯಲ್ಲಿಯೂ ಅವರಿಗೆ ಒಂದಷ್ಟು ವಿಶ್ವಾಸಾರ್ಹತೆ ಇದೆ. ಸೆಲೆಬ್ರಿಟಿಗಳು ಅವರ ಮಾತನ್ನು ನಂಬುತ್ತಾರೆ.

ಇತ್ತೀಚಿನ ಸಂದರ್ಶನದಲ್ಲಿ, ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನ ಮತ್ತು ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಅವರು ನಿರ್ದಿಷ್ಟ ಪಕ್ಷದಿಂದ ಸಂಸದರಾಗುತ್ತಾರೆ ಎಂದು ಹೇಳಿದ್ದಾರೆ. ಹೈದರಾಬಾದ್‌ನಲ್ಲಿರುವ ರಶ್ಮಿಕಾ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಈಗ ಅವರು ನ್ಯಾಷನಲ್‌ ಕ್ರಶ್ ಆಗಿದ್ದಾರೆ. ಚಿತ್ರಕ್ಕೆ 6 ರಿಂದ 7 ಕೋಟಿ ರೂಪಾಯಿ ಸಂಬಾವನೆ ತೆಗೆದುಕೊಳ್ಳುತ್ತಿದ್ದಾರೆ. ಅವರು ಶೀಘ್ರದಲ್ಲೇ ಸಂಸದೆಯೂ ಆಗಲಿದ್ದಾರೆ. ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆಗೆ ಆಯ್ಕೆಯಾಗಲಿದ್ದಾರೆ. ಇದನ್ನು ಅವರ ಜಾತಕದಲ್ಲಿ ಬರೆಯಲಾಗಿದೆ. ರಶ್ಮಿಕಾಗೆ ಆ ಯೋಗವಿದೆ. ಹಾಗಾಗಿ ರಶ್ಮಿಕಾ ಶೀಘ್ರದಲ್ಲೇ ಸಂಸದೆಯಾಗಲಿದ್ದಾರೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

ಅದೇ ಸಮಯದಲ್ಲಿ ಪಕ್ಷ ಮತ್ತು ಸ್ಥಳವನ್ನು ಉಲ್ಲೇಖಿಸಿದ ವೇಣು ಸ್ವಾಮಿ ಅವರ ಈ ಮಾತುಗಳು ಫುಲ್‌ ವೈರಲ್ ಆಗಿವೆ. ಸ್ಟಾರ್ ಹೀರೋಯಿನ್ ಆಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ರಾಜಕೀಯದ ಕಡೆಗೇಕೆ ಹೋಗುತ್ತಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ವೇಣು ಸ್ವಾಮಿ ರಶ್ಮಿಕಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ