ನಿನ್ನೆ ನೀಡಿದ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನನ್ನನ್ನು ಶಿಕಾರಿಪುರದ ಜನ ಚುನಾವಣೆಗೆ ನಿಲ್ಲಲು ಒತ್ತಾಯ ಮಾಡಿದ್ರು. ಆದ್ರೆ ನಾನು ನಿಲ್ಲೋದಿಲ್ಲ, ವಿಜಯೇಂದ್ರ ನಿಲ್ತಾರೆ ಎಂದು ಹೇಳಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆ ನಾನು ಹೇಳಿದ ಹೇಳಿಕೆ ಅನಿರೀಕ್ಷಿತ, ಅಲ್ಲಿನ ಜನ ನೀವೇ ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಅದಕ್ಕೆ ನಾನು ಸ್ಪರ್ಧೆ ಮಾಡಲ್ಲ. ನನ್ನ ಮಗ ವಿಜಯೇಂದ್ರ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದ್ದೇನೆ. ಆದರೇ ವರಿಷ್ಠರು ಹೇಳಿದ ಕಡೆ ವಿಜಯೇಂದ್ರಸ್ಪರ್ಧೆ ಮಾಡ್ತಾರೆ.
ಮೈಸೂರು, ಚಾಮರಾಜನಗರ, ಹಳೇ ಮೈಸೂರು ಭಾಗವಾದರೂ ಸರಿ ಹೈಕಮಾಂಡ್ ತೀರ್ಮಾನವೇ ಅಂತಿಮ, ನನ್ನ ಸಲಹೆ ಅಷ್ಟೇ ಎಂದಿದ್ದಾರೆ.
ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಆರ್ ಅಶೋಕ್ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದ್ರು.