Breaking News

ಜನರು ತುಂಬಿದ್ದ ನೀರಿನ ಬಿಲ್ ಗುಳುಂ ಮಾಡಿತಾ ದಂಡು ಮಂಡಳಿ..?

Spread the love

ನೀರಿನ ಬಿಲ್‍ನ್ನು ಇಲ್ಲಿನ ಜನರು ತುಂಬಿದರೂ ಕೂಡ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ಇಲ್ಲಿನ ಮನೆಗಳಿಗೆ ಕಳೆದ 20 ದಿನಗಳಿಂದ ನೀರನ್ನು ಬಿಟ್ಟಿಲ್ಲ. ಇದರಿಂದ ರೋಸಿ ಹೋದ ಇಲ್ಲಿನ ಮಹಿಳೆಯರು ಸಂಬಂಧಿಸಿದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು ಹೀಗೆ ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ನಿಂತಿರುವ ಈ ನೂರಾರು ಮಹಿಳೆಯರು ಬೆಳಗಾವಿಯ ಕ್ಯಾಂಪ್ ಪ್ರದೇಶದವರು. ಕಳೆದ 20 ದಿನಗಳಿಂದ ಇವರ ಮನೆಗಳಿಗೆ ನೀರನ್ನು ಬಿಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಬೆಳಗಾವಿಯ ದಂಡು ಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇನ್ನು ನೀರು ಯಾಕೆ ಬಿಟ್ಟಿಲ್ಲ ಎಂದರೆ ಇವರು ನೀರಿನ ಬಿಲ್ ತುಂಬಿದರೂ ದಂಡು ಮಂಡಳಿಯವರು ಕೆಯುಡಬ್ಲುಎಸ್‍ನವರಿಗೆ ಬಿಲ್ ತುಂಬದೇ ಇರೋದರಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆಯಂತೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಕ್ಯಾಂಪ್ ಪ್ರದೇಶದ ಈ ನಿವಾಸಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಮಾತನಾಡಿದ ಪ್ರತಿಭಟನಾನಿರತ ಮಹಿಳೆಯರು ನಾವು ಎಲ್ಲಾ ಮನೆಯವರು ನೀರಿನ ಬಿಲ್ ಪ್ರತಿ ತಿಂಗಳು ತಪ್ಪದೇ ತುಂಬಿದ್ದೇವೆ. ಆದರೆ ಇವರು ಬಿಲ್ ತುಂಬಲಿಲ್ಲ ಎಂದರೆ ನಾವು ಏನು ಮಾಡೋಕೆ ಆಗುತ್ತೆ.

ನಮಗೆ ಇವರು ನೀರು ಬಿಡಬೇಕಲ್ಲವೇ..? ಇಡೀ ಕ್ಯಾಂಪ್ ಏರಿಯಾಕೆ ಸುಮಾರು 20 ದಿನಗಳಿಂದ ನೀರು ಬಿಟ್ಟಿಲ್ಲ. ತುಂಬಿ ಇಟ್ಟಿದ್ದ ನೀರನ್ನು ಹೇಗೆ ಕುಡಿಯೋದು. ನೀರು ಇಲ್ಲದ್ದರಿಂದ ಎಲ್ಲಾ ಗಲೀಜು ಆಗಿದೆ. ಬೋರ್‍ನ್ನು ಬಂದ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಅವು ಹೊಲಸು ನೀರು ಬರುತ್ತವೆ. ಅದೇ ನೀರನ್ನು ಸೊಸಿಕೊಂಡು ಉಪಯೋಗಿಸುತ್ತಿದ್ದೇವೆ. ಇನ್ನು ದಂಡು ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿದ್ರೆ ಯಾರೂ ನಮ್ಮ ಕರೆ ಸ್ವೀಕರಿಸಲ್ಲ, ಯಾವುದೇ ರೀತಿ ನಮ್ಮ ಸಂಕಷ್ಟ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ