Breaking News

ಮೊಬೈಲ್​​ ಕೊಡಿಸದಿದ್ದಕ್ಕೆ ಅಪ್ಪನ ಜನ್ಮ ದಿನವೇ ಮಗ ಆತ್ಮಹತ್ಯೆ

Spread the love

ಬೆಳಗಾವಿ: ತಂದೆಯ ಜನ್ಮದಿನದಂದೇ 17 ವರ್ಷದ ಮಗನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪೂರದ ಹಲಕರ್ಣಿ ಗ್ರಾಮದಲ್ಲಿ ನಡೆದಿದೆ‌. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮದ ಪ್ರಥಮೇಶ ರಾಜು ಕೋಳಿ (17) ಮೃತ ದುರ್ದೈವಿ. ಇವರ ತಂದೆ ರಾಜು ಕೋಳಿ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ‌.

ತಂದೆಗೆ ಮೊಬೈಲ್ ಕೊಡಿಸುವಂತೆ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರಥಮೇಶ ಎರಡು ದಿನಗಳಿಂದ ಹಠ ಹಿಡಿದಿದ್ದನಂತೆ‌. ಒಂದೆರಡು ದಿನಗಳ ಕಾಲ ಮನೆಯಲ್ಲಿರುವ ಹಳೆಯ ಫೋನ್ ಬಳಸು, ಆಮೇಲೆ ಫೋನ್ ಕೊಡಿಸುತ್ತೇನೆ ಎಂದು ತಿಳಿಸಿದ್ದರಂತೆ. ಅಷ್ಟಕ್ಕೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇವತ್ತು ಪ್ರಥಮೇಶ ತಂದೆ ರಾಜು ಕೋಳಿಯವರ ಹುಟ್ಟು ಹಬ್ಬವಾದ್ದರಿಂದ ಮಗನಿಗೆ ಫೋನ್ ಕೊಡಿಸಲು ಹತ್ತು ಸಾವಿರ ಹಣವನ್ನು ತೆಗೆದಿಟ್ಟಿದ್ದರಂತೆ. ಆದ್ರೆ, ತಂದೆ ಕೆಲಸಕ್ಕೆ ಹಾಗೂ ತಾಯಿ ಹೊಲಕ್ಕೆ ಹೋಗಿ ಮನೆಗೆ ಬರುವಷ್ಟರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಬಂದಿದೆ..


Spread the love

About Laxminews 24x7

Check Also

ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ

Spread the love ಹುಕ್ಕೇರಿ : ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ ಹುಕ್ಕೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ