ಹುಬ್ಬಳ್ಳಿ : ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಿಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಪುಲ್ ಡ್ರೀಲ್ ನಡೆದಿದೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಮಾತ್ರವಲ್ಲ ಒಂದೊದೇ ಸತ್ಯವನ್ನು ಬಾಯಿ ಬಿಡುತ್ತಿದ್ದಾರೆ.
ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞಚಂದ್ರಶೇಖರ ಗುರೂಜಿಅಂತ್ಯಕ್ರಿಯೆ ನಡೆದಿದೆ. ಅವರ ಕುಟುಂಬಸ್ಥರು, ಅನುಯಾಯಿಯಿಗಳು ಗುರೂಜಿಯನ್ನು ಕಳೆದು ಕೊಂಡ ನೋವಿನಿಂದ ಹೊರ ಬಂದಿಲ್ಲ. ಈ ನಡುವೆ ಪ್ರಕರಣದ ಆರೋಪಿಗಳಾದ ಮಹಾಂತೇಶ ಶಿರೂರ, ಮತ್ತು ಮಂಜುನಾಥ ಮರೆವಾಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಕೊಲೆಗೆ ಏನು ಕಾರಣ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರೂ ಹಂತಕರು ಹತ್ತರಿಂದ ಹನ್ನೆರಡು ವರ್ಷ ಚಂದ್ರಶೇಖರ ಗುರೂಜಿ ಬಳಿಯೇ ಕೆಲಸ ಮಾಡಿದ್ದು, 2016ರಲ್ಲೇ ಕೆಲಸ ಬಿಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲಿಂದ ಹೊರಬಂದ ಬಳಿಕ ಸ್ವಂತ ಉದ್ಯೋಗ ಆರಂಭಿಸಿ ಜೀವನ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಶೇಖರ ಗುರೂಜಿ ಬಳಿಯ ಕೆಲಸ ಬಿಟ್ಟ ನಂತರರಿಯಲ್ ಎಸ್ಟೇಟ್ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಆರೋಪಿಗ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ತಮ್ಮನ್ನು ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಕೂಡಾ ಬಿಡಲಿಲ್ಲ. ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಗಳು ಆಪಾದಿಸಿದ್ದಾರೆ. ಎಲ್ಲೇ ಬಿಜಿನೆಸ್ ಮಾಡಿದರೂ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು ಎಂದಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಗುರೂಜಿಯನ್ನು ಹಂತಕರು ಸಂಧಾನಕ್ಕೆಂದು ಕರೆದಿದ್ದರು ಎನ್ನಲಾಗಿದೆ.