ನವದೆಹಲಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಸೌಲಭ್ಯವನ್ನುವನ್ನು ಕೊರೊನಾ ಅವಧಿಯಲ್ಲಿ, ದೇಶದ ಬಡ ಕುಟುಂಬಗಳಿಗೆ ನೀಡಲಾಗುತಿತ್ತು. ಈ ಇದನ್ನು ಸೆಪ್ಟೆಂಬರ್ ನಂತರ ನಿಲ್ಲಿಸಬಹುದು ಎನ್ನಲಾಗಿದೆ.
ಹಣಕಾಸು ಸಚಿವಾಲಯದ ಅಡಿಯಲ್ಲಿನ ವೆಚ್ಚಗಳ ಇಲಾಖೆ ಈ ಯೋಜನೆಯನ್ನು ಸೆಪ್ಟೆಂಬರ್ ನಂತರ ವಿಸ್ತರಿಸಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ ಎನ್ನಲಾಗಿದೆ.
‘ಈ ಯೋಜನೆಯು ದೇಶದ ಮೇಲೆ ಆರ್ಥಿಕ ಹೊರೆಯನ್ನು ತುಂಬಾ ಹೆಚ್ಚಿಸುತ್ತಿದೆ. ಇದು ದೇಶದ ಆರ್ಥಿಕ ಆರೋಗ್ಯಕ್ಕೂ ಒಳ್ಳೆಯದಲ್ಲ. ಕಳೆದ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿರುವುದು ಆದಾಯದ ಮೇಲೆ ಸುಮಾರು 1 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಹೊರೆಯಾಗಿದ್ದು, ಈ ಗ ಮತ್ತೆ ಹೆಚ್ಚಿನ ಪರಿಹಾರವನ್ನು ನೀಡಿದರೆ, ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗುತ್ತದೆ. ಈಗ ಸಾಂಕ್ರಾಮಿಕ ರೋಗದ ಪರಿಣಾಮ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈ ಉಚಿತ ಪಡಿತರದ ಯೋಜನೆಯನ್ನು ನಿಲ್ಲಿಸಬಹುದು ಅಂತ ಹೇಳಿದೆ ಎನ್ನಲಾಗಿದೆ.
Laxmi News 24×7