ಬೆಂಗಳೂರು: ‘ಸಿದ್ದರಾಮೋತ್ಸವ’ಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ ಭುಗಿಲೆದ್ದಿದ್ದು, ಸಿದ್ದರಾಮಯ್ಯ ಒಬ್ಬರೇ ನಾಯಕರಲ್ಲ ಇನ್ನೂ ಹಿರಿಯ ನಾಯಕರು ಇದ್ದಾರೆ ಎನ್ನುವ ಅರ್ಥದಲ್ಲಿ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ತಮ್ಮ ಹುಟ್ಟುಹಬ್ಬವನ್ನು ಶಕ್ತಿ ಪ್ರದರ್ಶನದ ರೀತಿಯಲ್ಲಿ ಸಿದ್ದರಾಮಯ್ಯ ಆಚರಣೆ ಮಾಡಿಕೊಳ್ಳುತ್ತಿದ್ದು, ಆಗಸ್ಟ್ 3ರಿಂದ ‘ಸಿದ್ದರಾಮೋತ್ಸವ’ ಕಾರ್ಯಕ್ರಮ ಮಾಡಲು ದೇಶಪಾಂಡೆ ಸಮಿತಿ ನಿರ್ಧಾರ ಮಾಡಿದೆ.
ಸುಮಾರು 5 ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಲು ಸಮಿತಿ ತೀರ್ಮಾನಿಸಿದೆ. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮೊದಲಿಗೆ ಆ ಕಾರ್ಯಕ್ರಮವೇ ಗೊತ್ತಿಲ್ಲ ಎಂದ ಡಿಕಿಶಿ, ಬಳಿಕ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಒಂದೂ ಫ್ಲೆಕ್ಸ್ ಹಾಕಿಸಿಕೊಳ್ಳಲಿಲ್ಲ. ಕೇದಾರನಾಥ ದೇವಸ್ಥಾನಕ್ಕೆ ನಾನು ಮತ್ತು ನನ್ನ ಪತ್ನಿ ಪೂಜೆ ಮಾಡಿದೆವು ಎಂದಿದ್ದಾರೆ.
ಖರ್ಗೆ ಅವರು ಎಂಎಲ್ಎ ಆಗಿ 50 ವರ್ಷ ಆಯ್ತು. ಅವರ ಅಭಿಮಾನಿಗಳು ಕೂಡ ಕಾರ್ಯಕ್ರಮ ಮಾಡುತ್ತಾರೆ ಎನ್ನುತ್ತಾರೆ. ಪರಮೇಶ್ವರ ಅವರ ಪುಸ್ತಕ ಬಿಡುಗಡೆ ಬಗ್ಗೆ ಮಾತಾಡುತ್ತಾರೆ. ಸಿದ್ದರಾಮಯ್ಯ ಒಬ್ಬರೇ ನಾಯಕರಲ್ಲ, ಇನ್ನೂ ಹಿರಿಯ ನಾಯಕರು ಇದ್ದಾರೆ ಎನ್ನುವ ಅರ್ಥದಲ್ಲಿ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದು ಪರೋಕ್ಷವಾಗಿ ಭಾನುವಾರ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.
Laxmi News 24×7