Breaking News

ಸಿದ್ದರಾಮಯ್ಯ ಸವದತ್ತಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಈ ಬಗ್ಗೆ ಯಾವುದೇ ರೀತಿ ಚರ್ಚೆ ಆಗಿಲ್ಲ.: ಸತೀಶ ಜಾರಕಿಹೊಳಿ

Spread the love

ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಳಿಸಲು ಬಿಜೆಪಿ ಮೊದಲ ದಿನದಿಂದಲೂ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಅವರು ಯಶಸ್ವಿಯಾಗಿರಲಿಲ್ಲ. ಎಲ್ಲಾ ಶಾಸಕರಿಗೆ ಬೇರೆ ಬೇರೆ ಆಮೀಷಗಳನ್ನು ಒಡ್ಡಿ, ಅವರ ಮೇಲಿರುವ ಇಡಿ, ಐಟಿ ಕೇಸ್‍ಗಳ ಬಗ್ಗೆ ಒತ್ತಡ ಹಾಕಿ ಅವರು ಶಿವಸೇನಾದಿಂದ ಹೊರಗೆ ಬರುವಂತೆ ಮಾಡುವಲ್ಲಿ ಈಗ ಯಶಸ್ವಿಯಾಗಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಗೆ ರಮೇಶ ಜಾರಕಿಹೊಳಿ ಕಾರಣ ರಣತಂತ್ರ ಕಾರಣ ಎಂಬ ಮಾಧ್ಯಮಗಳ ಪ್ರಶ್ನೆಗೆ ಗೋಕಾಕ್‍ನಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಈ ಬಗ್ಗೆ ಅದರ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲಿ ಸ್ಥಳೀಯ ಸಮಸ್ಯೆಗಳಿಂದ ಉದ್ಭವವಾಗಿದೆ. ಬಿಜೆಪಿ ಕಡೆ ಶಿವಸೇನೆ ಬರಬೇಕು ಎಂಬ ಒತ್ತಡ ಬಹಳ ದಿನಗಳಿಂದ ಇತ್ತು. ಉದ್ಧವ್ ಠಾಕ್ರೆ ಬರದೇ ಇರುವ ಹಿನ್ನೆಲೆಯಲ್ಲಿ ಬೇರೆ ನಾಯಕನನ್ನು ಹುಟ್ಟು ಹಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ, ಕಾನೂನು ಉಲ್ಲಂಘನೆ ವಿಚಾರವನ್ನು ನಮ್ಮ ಕಾರ್ಯಕರ್ತರು ನಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಕಾನೂನಾತ್ಮಕವಾಗಿ ಕಾರ್ಮಿಕ ಇಲಾಖೆಯಲ್ಲಿ ಹೋರಾಟ ಮಾಡಲಾಗಿತ್ತು. ಹೀಗಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹೋರಾಟದಿಂದ ಅವರಿಗೆ ಪ್ರತಿಫಲ ಸಿಕ್ಕಿದೆ. ಕಾಂಗ್ರೆಸ್ ಕಾರ್ಯಕರ್ತರ ಬೆನ್ನು ಹತ್ತಿದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ವಿಚಾರಕ್ಕೆ ಈಗ ಕೆಲಸಕ್ಕೆ ತೆಗೆದುಕೊಳ್ಳಲು ಅವರಿಗೆ ಯಾವುದೇ ಅಧಿಕಾರ ಇಲ್ಲ. ಹೊಸ ಟೆಂಡರ್ ಆಗಬೇಕು, ಆಮೇಲೆ ಅವರು ಬಂದು ತೆಗೆದುಕೊಳ್ಳಬೇಕು. ಅದು ಬೇರೆ ವಿಷಯ, ಈಗ ಅವರು ಅನಧಿಕೃತವಾಗಿ ನಡೆಸುತ್ತಿದ್ದರು, ಅದಕ್ಕೊಂದು ನ್ಯಾಯ ಸಿಕ್ಕಿದೆ. ಮುಂದೆ ಏನಾಗುತ್ತೆ ನೋಡೋಣ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸವದತ್ತಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಈ ಬಗ್ಗೆ ಯಾವುದೇ ರೀತಿ ಚರ್ಚೆ ಆಗಿಲ್ಲ. ಚರ್ಚೆ ಆದಾಗ ನಿಮಗೆ ಹೇಳುತ್ತೇವೆ ಅಂತಾ ಅಷ್ಟೇ ಸತೀಶ ಜಾರಕಿಹೊಳಿ ಹೇಳಿದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ