ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕೆರೆಯಲ್ಲಿ ಬುಧವಾರ ಮೀನು ಹಿಡಿಯುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಹುಚ್ಚಾನಟ್ಟಿ ಗ್ರಾಮದ ಶಂಕರ ಪಾಟೀಲ (28) ಹಲ್ಲೆಯಿಂದ ಗಾಯಗೊಂಡವರು.
ಅವರನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದೆ.
ಶಂಕರ ಅವರು ನಾವಗೆ ಗ್ರಾಮದ ಕೆರೆಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಅದೇ ಜಾಗದಲ್ಲಿ ಮೀನು ಹಿಡಿಯಲು ಬಂದ ಇನ್ನೊಂದು ಗುಂಪಿನ ಯುವಕರು ತಕರಾರು ತೆಗೆದರು. ತಾವು ಕೇಳಿದ ಪ್ರಶ್ನೆಗೆ ಮರಾಠಿಯಲ್ಲಿ ಉತ್ತರ ನೀಡುವಂತೆ ಶಂಕರ ಅವರನ್ನು ಗದರಿಸಿದರು. ಆಗ ಶಂಕರ ಬೆಂಬಲಿಗರು ಕೂಡ ಸ್ಥಳಕ್ಕೆ ಬಂದರು. ಎರಡೂ ಗುಂಪಿನ ಯುವಕರ ಮಧ್ಯೆ ಗಲಾಟೆ ಗಲಾಟೆ ನಡೆಯಿತು.
ಈ ವೇಳೆ ಐವರು ಯುವಕರ ಗುಂಪು ಶಂಕರ ಅವರ ತಲೆ, ಕೈ, ಕಾಲುಗಳಿಗೆ ಬಡಿಗೆ, ಕಲ್ಲಿನಿಂದ ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ
Laxmi News 24×7