ಬಳ್ಳಾರಿ : ನಾನು ಮನಸ್ಸು ಮಾಡಿದರೆ ಮುಂದೊಂದು ದಿನ ಸಿಎಂ ಆಗ್ತಾನೆ. ಮನಸ್ಸು ಮಾಡಿದ್ರೆ ಯಾವಗ ಬೇಕಾದ್ರೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರೆಡ್ಡಿ, ರಾಮುಲು ಸೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗೆ ಶಾಸಕ, ಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. ನನಗಂತೂ ಯಾರಿಗೂ ಕೊಡಲಾರದ ಕಷ್ಟ ಕೊಟ್ಟಿದ್ದಾರೆ.ಆದರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಇಂತಹ ವಿಶೇಷ ಆಶೀರ್ವಾದ ಕನಕ ದುರ್ಗಮ್ಮ ನೀಡಿದ್ದಾಳೆ ಎಂದರು.
ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟು ಕಷ್ಟ ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಅಷ್ಟೊಂದು ತೊಂದರೆ ಕೊಟ್ಟರು ಎಂದು ಹೇಳಿದ್ದಾರೆ.
Laxmi News 24×7