Breaking News

ನಂದಗಡ ರಸ್ತೆಯ ಮಧ್ಯದಲ್ಲಿ ಸುಮಾರು ವರ್ಷಗಳಿಂದ ಉದ್ಘಾಟನೆ ಭಾಗ್ಯ ಇಲ್ಲದೇ ಇದ್ದ ಟ್ರೀ ಪಾರ್ಕ್ ಕೊನೆಗೂ ಉದ್ಘಾಟನೆ

Spread the love

ಖಾನಾಪೂರ- ನಂದಗಡ ರಸ್ತೆಯ ಮಧ್ಯದಲ್ಲಿ ಸುಮಾರು ವರ್ಷಗಳಿಂದ ಉದ್ಘಾಟನೆ ಭಾಗ್ಯ ಇಲ್ಲದೇ ಇದ್ದ ಟ್ರೀ ಪಾರ್ಕ್ ಕೊನೆಗೂ ಉದ್ಘಾಟನೆ ಭಾಗ್ಯ ಕಂಡಿತು.

ಅರಣ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಸುಮಾರು ಎರಡು, ಮೂರು ವರ್ಷಗಳ ಕಾಲ ಇದು ಸಾರ್ವಜನಿಕರ ಸದುಪಯೋಗಕ್ಕೆ ಅನುಕೂಲ ವಾಗದೇ ರೀತಿಯಲ್ಲಿ ಇತ್ತು ಒಳಗಡೆ ಅಂತೂ ಸುವ್ಯವಸ್ಥಿತ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ವಾಯು ವಿಹಾರಕ್ಕೆ ಸುಂದರವಾದ ವಾತಾವರಣದಿಂದ ಕೂಡಿದೆ ಆದರೆ ಇದನ್ನು ಸಾರ್ವಜನಿಕರಿಗೆ ಸದ್ಬಳಕೆ ಸಮರ್ಪಿಸುವಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಹಾಗೆಯೇ ಬಿದ್ದಿತು, ಇಂದು ಅರಣ್ಯ ಇಲಾಖೆಯ ಸಚಿವ ಉಮೇಶ್ ಕತ್ತಿ ಅವರು ಉದ್ಘಾಟಿಸಿ ನೇರವೆರಿಸಿದರು.

ನಂತರದಲ್ಲಿ ವೇದಿಕೆ ಮೇಲೆ ದ್ವೀಪ ಪ್ರಜ್ವಲಿಸುವ ಮೂಲಕ ಸಚಿವ ಉಮೇಶ್ ಕತ್ತಿ, ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಸೇರಿದಂತೆ ಇನ್ನಿತರರು,” ಸಾಲು ಮರದ ತಿಮ್ಮಕ್ಕ” ಟ್ರೀ ಪಾರ್ಕ್ ಅಧಿಕೃತವಾಗಿ ಉದ್ಘಾಟಿಸಿದರು.

ಉದ್ಘಾಟನೆ ನೇರವೆರಿಸಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಅವರು ಸಾಲು ಮರದ ತಿಮ್ಮಕ್ಕ ಎಂಬ ಉದ್ಯಾನವನ ಉದ್ಘಾಟನೆ ಮಾಡಿದ್ದು ಮುಂದಿನ ವಾರದಲ್ಲಿ ತಾಲೂಕಿನ ಅರಣ್ಯ ಸಮಸ್ಯೆಗಳು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಧಿಕಾರಿಗಳ ಸಭೆ ಆಯೋಜಿಸಿ ಬಗ್ಗೆ ಹರಿಸುವುದಾಗಿ ತಿಳಿಸಿದ್ರು.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ