ಬೆಳಗಾವಿ – ಇಲ್ಲಿಯ ಗೌಂಡವಾಡ ಗ್ರಾಮದಲ್ಲಿ ರಾತ್ರೋರಾತ್ರಿ ಹಿಂಸಾಚಾರ ಬುಗಿಲೆದ್ದಿದೆ. ಓರ್ವನನ್ನು ಬರ್ಬರವಾಗಿ ಕೊಲೆಗೈಯಲ್ಲಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಗ್ರಾಮದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಹಳೆಯ ಜಮೀನು ವಿವಾದವೊಂದು ಇಂದು ಹೊಸ ತಿರುವು ಪಡೆದು ಹಿಂಸಾಚಾರ ಆರಂಭವಾಗಿದೆ. ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆಗೈಯಲಾಗಿದೆ.
ಸತೀಶ ಪಾಟೀಲ ಎಂಬ ವ್ಯಕ್ತಿಯನ್ನು ಬಿರ್ಜೆ ಕುಟುಂಬದವರು ಕಾರು ಪಾರ್ಕಿಂಗ್ ಮಾಡಿದ ನೇಪವೊಡ್ದಿ ರಾತ್ರಿ 9 ಗಂಟೆ ವೇಳೆಗೆ ಜಂಬೆಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿ ಹಲವು ವಾಹನಗಳು ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ.
ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ನಡೆದಿದೆ.
ಇಡೀ ಗ್ರಾಮದಲ್ಲಿ ತ್ವೇಷಮಯ ವಾತಾವರಣವಿದೆ.