Breaking News

ಸಾಲ ವಸೂಲಾತಿ ವೇಳೆ ದರ್ಪ ತೋರುವಂತಿಲ್ಲ: RBI ಗವರ್ನರ್ ಎಚ್ಚರಿಕೆ

Spread the love

ಮುಂಬೈ: ಸಾಲ ವಸೂಲಾತಿ ಏಜೆಂಟ್‌ ಗಳು ಬಳಸುವ ಕಠಿಣ ಕ್ರಮಗಳ ವಿರುದ್ಧ ಆರ್‌.ಬಿ.ಐ. ಗವರ್ನರ್ ಎಚ್ಚರಿಕೆ ನೀಡಿದ್ದಾರೆ.

ಕೆಲವು ಸಾಲದಾತರು ತಮ್ಮ ವಸೂಲಾತಿ ಏಜೆಂಟ್‌ ಗಳ ಮೇಲೆ ಸಾಕಷ್ಟು ದೂರು ನೀಡಿದ್ದಾರೆ. ಏಜೆಂಟರ ಮೇಲೆ ನಿಯಂತ್ರಣಗಳಿಲ್ಲದಿದ್ದರೆ ಕಿರುಕುಳ ನೀಡುತ್ತಾರೆ ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ನಿಯಂತ್ರಿತ ಘಟಕಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ಆರ್.ಬಿ.ಐ.

ಗಂಭೀರ ಕ್ರಮ ತೆಗೆದುಕೊಳ್ಳುತ್ತದೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡುವುದು, ಅಸಭ್ಯ ಭಾಷೆ ಬಳಕೆ, ಬೆದರಿಕೆ ವಿಧಾನ “ಸ್ವೀಕಾರಾರ್ಹವಲ್ಲ” ಎಂದು ದಾಸ್ ಹೇಳಿದ್ದು, ಅಂತಹ ಚಟುವಟಿಕೆಗಳನ್ನು ನಿಗ್ರಹಿಸಲು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು RBI ಅಂತಹ ಘಟನೆಗಳ ಬಗ್ಗೆ “ಗಂಭೀರ ಗಮನ” ನೀಡುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಮಧ್ಯರಾತ್ರಿಯ ನಂತರವೂ ಗ್ರಾಹಕರನ್ನು ವಸೂಲಾತಿ ಏಜೆಂಟ್‌ ಗಳು ಸಂಪರ್ಕಿಸಿರುವ ಬಗ್ಗೆ ನಾವು ದೂರುಗಳನ್ನು ಸ್ವೀಕರಿಸಿದ್ದೇವೆ. ರಿಕವರಿ ಏಜೆಂಟ್‌ಗಳು ಅಸಭ್ಯ ಭಾಷೆ ಬಳಸುತ್ತಿರುವ ದೂರುಗಳೂ ಇವೆ. ರಿಕವರಿ ಏಜೆಂಟ್‌ಗಳ ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಬಳಕೆಯು ಹೆಚ್ಚುತ್ತಿದೆ. ಡಿಜಿಟಲ್ ವಂಚನೆಗಳು ಮತ್ತು ಗ್ರಾಹಕರ ಅಸಮಾಧಾನದ ಘಟನೆಗಳಿಗೆ ಕಾರಣವಾಗಿದೆ ಎಂದ ಅವರು, ಡಿಜಿಟಲ್ ಸಾಲ ನೀಡುವ ಕುರಿತು ಆರ್‌.ಬಿ.ಐ. ವರ್ಕಿಂಗ್ ಗ್ರೂಪ್‌ ನ ಶಿಫಾರಸುಗಳ ಅನ್ವಯ ಮಾರ್ಗಸೂಚಿಗಳ ಬಿಡುಗಡೆಗಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ