ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್

Spread the love

ಬೆಂಗಳೂರು: ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ತೆಗೆದುಕೊಂಡ ನಟಿಯ ಮುಖ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಂಪೂರ್ಣ ಚೇಂಚ್ ಆಗಿರುವ ಘಟನೆ ಬೆಳಗಿಗೆ ಬಂದಿದೆ.

ಹಲ್ಲು ನೋವಿನಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಜೆಪಿ ನಗರದ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಕಳೆದ 28 ದಿನಗಳ ಹಿಂದೆ ಚಿಕಿತ್ಸೆ ತೆಗೆದುಕೊಂಡಿದ್ದರು. ಆ ಬಳಿಕ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಟಿಯ ಮುಖ ಸಂಪೂರ್ಣ ಊದಿಕೊಂಡು ರೂಪವೇ ಬದಲಾಗಿದೆ. ಇದೀಗ ಕಳೆದ ಇಪ್ಪತ್ತು ದಿನದಿಂದ ಮನೆಯಿಂದ ಹೊರಬಾರದೇ ನಟಿ ಕಣ್ಣೀರು ಹಾಕುತ್ತಿದ್ದಾರೆ.

ಈ ಬಗ್ಗೆ ತಜ್ಞ ವೈದ್ಯರ ಬಳಿ ವಿಚಾರಿಸಿದಾಗ ಡೆಂಟಲ್ ಆಸ್ಪತ್ರೆ ವೈದ್ಯರ ಯಡವಟ್ಟು ಗೊತ್ತಾಗಿದೆ. ಚಿಕಿತ್ಸೆ ವೇಳೆ ಅನಸ್ತೇಷಿಯಾ ಬದಲು ಬೇರೊಂದು ಇಂಜೆಕ್ಷನ್ ಕೊಟ್ಟಿರೋದು ಬೆಳಕಿಗೆ ಬಂದಿದೆ. ಬಳಿಕ ನಟಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಇತ್ತ ಚಿಕಿತ್ಸೆ ನೀಡಿದ ವೈದ್ಯರು ನಿರ್ಲಕ್ಷ್ಯ ಮುಂದುವರಿಸಿದ್ದು ನಟಿ ಕಂಗಾಲಾಗಿದ್ದಾರೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ